Ad Widget .

ಕೆಲವೇ ಕ್ಷಣಗಳಲ್ಲಿ ಹೊರಬರಲಿದ್ದಾರೆ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರು

ಸಮಗ್ರ ನ್ಯೂಸ್: ಉತ್ತರಕಾಶಿಯ ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೊರತೆಗೆಯಲು ಎಲ್ಲ ರೀತಿಯ ಕಾರ್ಯಚರಣೆ ನಡೆಸಲಾಗಿದ್ದು, ಇದೀಗ ಎಲ್ಲ ಕಾರ್ಮಿಕರು ಸುರಕ್ಷಿತವಾಗಿ ಕೆಲವೇ ಕ್ಷಣದಲ್ಲಿ ಹೊರಬರಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ರಕ್ಷಣಾ ತಂಡ ತನ್ನ ಕಾರ್ಯವನ್ನು ಮುಂದುವರಿಸಿದ್ದು, ಕಾರ್ಮಿಕರನ್ನು ರಕ್ಷಣೆ ಮಾಡಲಿದೆ ಎಂದು ಎನ್​​ಡಿಆರ್​​ಎಫ್​​​​ ಹೇಳಿದೆ. ಸುರಂಗದ ಒಳಗೆ ಎನ್​​​ಡಿಆರ್​ಎಫ್​​​​ ತಂಡ ಕೂಡ ಈಗಾಗಲೇ ಹೋಗಿದೆ. ಸ್ಥಳದಲ್ಲಿ ಆರೋಗ್ಯ ಸಿಬ್ಬಂದಿಗಳು ಧಾವಿಸಿದ್ದು, ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‌ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ.
ಇಲ್ಲಿ41 ಕಾರ್ಮಿಕರಿಗೆ 41 ಆಂಬುಲೆನ್ಸ್ ವ್ಯವಸ್ಥೆ ಮಾಡಿದೆ.

Ad Widget . Ad Widget .

ಅಧಿಕಾರಿಗಳು ನೀಡಿದ ವರದಿಗಳ ಪ್ರಕಾರ ಸುರಂಗದ ಒಳಗೆ ಮೊದಲು 41 ಕಾರ್ಮಿಕರ ಆರೋಗ್ಯವನ್ನು ತಪಾಸಣೆ ಮಾಡಲಾಗುವುದು. ಅಲ್ಲಿ ಅವರಿಗೆ ಬೇಕಾದ ಆಹಾರಗಳನ್ನು ಕೂಡ ನೀಡಲಾಗುವುದು ಎಂದು ಹೇಳಿದ್ದಾರೆ. ಸುರಂಗದ ಹೊರಗೆ ಬರುತ್ತಿದ್ದಂತೆ ಅವರನ್ನು ಆಂಬ್ಯುಲೆನ್ಸ್​​​ ಮೂಕ ರಿಷಿಕೇಶ ಆಸ್ಪತ್ರೆಗೆ ಸಾಗಿಸಲಾಗುವುದು ಎಂದು ಹೇಳಿದ್ದಾರೆ.
ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರ ರಕ್ಷಣೆ ಕಾರ್ಯ 17ನೇ ದಿನಕ್ಕೆ ಕಾಲಿಟ್ಟಿದೆ, ಇಂದು ಕೆಲವೇ ಕ್ಷಣಗಳಲ್ಲಿ ಕಾರ್ಮಿಕರು ಹೊರಬರಲಿದ್ದಾರೆ.

Ad Widget . Ad Widget .

ಸೋಮವಾರ ಸಂಜೆ ಇಲಿ-ಹೋಲ್ ಗಣಿಗಾರಿಕೆ ಪ್ರಾರಂಭವಾಗಿತ್ತು. ಸುರಂಗಗಳನ್ನು ಪ್ರವೇಶಿಸಲು ಮತ್ತು ಕೈಯಲ್ಲಿ ಅಗೆಯಲು ದೆಹಲಿ ಮತ್ತು ಝಾನ್ಸಿಯಿಂದ ಕನಿಷ್ಠ 6 ಇಲಿ-ಹೋಲ್ ಗಣಿಗಾರರು ಆಗಮಿಸಿದರು. ಅವಶೇಷದ ಒಳಗೆ ಸಿಲುಕಿಕೊಂಡಿರುವ ಕಾರ್ಮಿಕರು 60 ಮೀಟರ್ ಹಿಂದಿದ್ದಾರೆ ಮತ್ತು ರಕ್ಷಣಾ ತಂಡ ಸುಮಾರು 12 ಮೀಟರ್ ದೂರದಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ರಕ್ಷಣಾ ತಂಡ, ಒಳಗೆ ಸಿಲುಕಿಕೊಂಡಿರುವ ಕಾರ್ಮಿಕ ಹತ್ತಿರ ತಲುಪಿದ್ದಾರೆ.

ಸ್ಟ್ರೆಚರ್ ಮೂಲಕ ಕಾರ್ಮಿಕರನ್ನು ಹೊರತರಲಿದ್ದಾರೆ NDRF ಟೀಂ. ಚಿಕಿತ್ಸೆ ನೀಡಲು ವೈದ್ಯರು, ತಜ್ಞರ ತಂಡ ನಿಯೋಜನೆ ಮಾಡಲಾಗಿದೆ.
ಸ್ಥಳಕ್ಕೆ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಪರಿಶೀಲನೆ ನಡೆಸಿದ್ದಾರೆ. ಪ್ರಧಾನಿ ಮೋದಿ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

Leave a Comment

Your email address will not be published. Required fields are marked *