Ad Widget .

ಪೂಜಾ ಗಾಂಧಿ ಮದುವೆಯಂತೆ/ ವರನ್ಯಾರು ಗೊತ್ತೇ?

ಮಳೆ ಹುಡುಗಿ ಎಂದೆ ಖ್ಯಾತಿ ಪಡೆದಿರುವ ನಟಿ ಪೂಜಾ ಗಾಂಧಿ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಅವರ ಆಪ್ತರು ಹಲಯದಲ್ಲಿ ಹರಿದಾಡುತ್ತಿದ್ದು. ಸ್ವತಃ ಪೂಜಾ ಗಾಂಧಿಯವರೆ ಮಾಧ್ಯಮಗಳಿಗೆ ಪತ್ರ ಬರೆದು ತಮ್ಮ ಮದುವೆ ಕುರಿತಾಗಿ ಖಚಿತ ಪಡಿಸಿದ್ದಾರೆ. ಉತ್ತರ ಭಾರತದಿಂದ ಬಂದ ಮಳೆ ಹುಡುಗಿಯ ಕೈ ಹಿಡಿಯುತ್ತಿರುವ ವರ ಯಾರು ಎಂಬುದು ಸದ್ಯಕ್ಕೆ ಹಾಟ್ ನ್ಯೂಸ್.

Ad Widget . Ad Widget .

ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರಾಧ ವಿಜಯ್ ಘೋರ್ಪಡೆ ಹಾಗೂ ಪೂಜಾ ಗಾಂಧಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಈಗ ಇಬ್ಬರೂ ತಮ್ಮ ಪ್ರೀತಿಗೆ ಮದುವೆ ಎನ್ನುವ ಅರ್ಥ ನೀಡುತ್ತಿದ್ದಾರೆ. 29 ನವೆಂಬರ್ 2023ರಂದು ಬೆಂಗಳೂರಿನ ಯಲಹಂಕದಲ್ಲಿ ಕನ್ನಡಿಗನ ಕೈ ಹಿಡಿದು ಕರ್ನಾಟಕದ ಸೊಸೆ ಆಗಲು ಉತ್ತರ ಭಾರತದ ಬೆಡಗಿ ಪೂಜಾ ಗಾಂಧಿ ಮುಂದಾಗಿದ್ದು, ಈಗಾಗಲೇ ಪೂಜಾ ತಮ್ಮ ಆಪ್ತರಿಗೆ ಕರೆ ಮಾಡಿ, ಮದುವೆ ಆಹ್ವಾನ ನೀಡಿದ್ದಾರೆ

Ad Widget . Ad Widget .

ಪೂಜಾ ಗಾಂಧಿ ಅವರು ಮೂಲತಃ ಉತ್ತರ ಪ್ರದೇಶದ ಬೆಂಗಾಲಿ ಕುಟುಂಬದವರಾಗಿದ್ದು, ಉದ್ಯಮಿ ವಿಜಯ್ ಘೋರ್ಪಡೆ ಅವರಿಗೆ ಕನ್ನಡ ಕಲಿಸಿದ್ದರು ಎನ್ನಲಾಗಿದೆ. ಪೂಜಾ ಗಾಂಧಿ ಹುಟ್ಟಿದ್ದು ಉತ್ತರಪ್ರದೇಶದ ಮೀರತ್, ಬೆಳೆದಿದ್ದು ಓದಿದ್ದು ದೆಹಲಿಯಲ್ಲಿ ಎಂಬ ಮಾಹಿತಿ ಇದೆ. ಮುಂಗಾರು ಮಳೆ ಸಿನಿಮಾ ಗೆದ್ದ ಬಳಿಕ ಅವರ ಖ್ಯಾತಿ ಹೆಚ್ಚಾಗಿದ್ದು, ಸಿನಿಮಾ, ರಾಜಕೀಯ ಕ್ಷೇತ್ರದಲ್ಲೂ ಪೂಜಾ ಗಾಂಧಿ ಗುರುತಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *