Ad Widget .

ಮಳೆ ಹುಡ್ಗಿ ಪೂಜಾ ಗಾಂಧಿ ಮದ್ವೆಯಂತೆ… ಸರಳ ವಿವಾಹದ ಮೂಲಕ ಗೆಳೆಯನನ್ನು ವರಿಸಲಿದ್ದಾರೆ

ಸಮಗ್ರ ಸಮಾಚಾರ: ಕನ್ನಡ ಸಿನಿರಂಗದಲ್ಲಿ ವಿವಾಹಗಳ ಪೂರವೆ ಹರಿದು ಬರ್ತಿದೆ. ಅದರಂತೆ ಇಲ್ಲೊಂದು ಸುದ್ದಿ ಹರಿದಾಡುತ್ತಿದೆ. ಮಳೆ ಹುಡುಗಿ ಪೂಜಾ ಗಾಂಧಿ ಕೊನೆಗೂ ಮದುವೆ ಆಗುತ್ತಿದ್ದಾರೆ ಎಂದು. ಬಹು ದಿನಗಳ ಗೆಳೆಯ ಉದ್ಯಮಿ ವಿಜಯ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆನಂದ್ ಗೌಡ ಜೊತೆಗೆ ನಿಶ್ಚಿತಾರ್ಥ ಆಗಿತ್ತು. ಅದು ಅಷ್ಟೇ ಬೇಗ ಮುರಿದು ಬಿತ್ತು. ಆದರೆ ಇದೀಗ ಪೂಜಾ ಗಾಂಧಿ ದಾಂಪತ್ಯ ಜೀವನಕ್ಕೆ ಕಾಲಿಡಲು ಡಿಸೈಡ್ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

Ad Widget . Ad Widget .

ಮಳೆ ಹುಡುಗಿ ಪೂಜಾ ಗಾಂಧಿ ದೂರದ ಉತ್ತರ ಭಾರತದಿಂದಲೆ ಕನ್ನಡ ನೆಲಕ್ಕೆ ಕಾಲಿಟ್ಟಿದ್ದರು. ಮುಂಗಾರು ಮಳೆಯಂತಹ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಅಲ್ಲಿಂದ ಇಲ್ಲಿವರೆಗೂ ಕನ್ನಡದವರೇ ಆಗಿದ್ದಾರೆ. ಕನ್ನಡ ಸಿನಿಮಾ ಮಾಡುತ್ತಲೇ ಕನ್ನಡದವರೇ ಆಗಿದ್ದಾರೆ. ಮನೆಯಲ್ಲಿ ಹಿಂದಿ ಭಾಷೆಯನ್ನೆ ಮಾತಾಡ್ತಾರೆ. ಆದರೆ ಇತ್ತೀಚಿಗೆ ಕನ್ನಡ ಕಲಿತು ಕನ್ನಡ ಭಾಷೆಯಲ್ಲಿಯೇ ಲೆಟರ್ ಬರೆದಿದ್ದಾರೆ. ಅಷ್ಟು ಕನ್ನಡ ಕಲಿತಿರೋ ಪೂಜಾ ಗಾಂಧಿ, ಇದೀಗ ಕನ್ನಡ ನೆಲದಲ್ಲಿಯೇ ವಿಜಯ್ ಅನ್ನುವ ಗೆಳೆಯನನ್ನ ಜೀವನ ಸಂಗಾತಿ ಆಯ್ಕೆ ಮಾಡಿಕೊಂಡಿದ್ದಾರೆ.

Ad Widget . Ad Widget .

ಬಹು ದಿನಗಳ ಗೆಳೆಯ ವಿಜಯ್ ಮೂಲತಃ ಒಬ್ಬ ಉದ್ಯಮಿ ಆಗಿದ್ದಾರೆ. ಲಾಜಿಸ್ಟಿಕ್ ಕಂಪನಿಯ ವಿಜಯ್ ಕನ್ನಡದವ್ರೇ ಅಗಿದ್ದಾರೆ. ಇವರನ್ನ ಮದುವೆ ಆಗುವ ಮೂಲಕ ಪೂಜಾ ಗಾಂಧಿ ಕರ್ನಾಟಕದ ಸೊಸೆ ಕೂಡ ಆಗುತ್ತಿದ್ದಾರೆ. ಇದರೊಟ್ಟಿಗೆ ಇವರ ಮದುವೆ ವಿಚಾರಕ್ಕೆ ಬಂದ್ರೆ, ಇದೇ ತಿಂಗಳು 29 ರಂದು ವಿಜಯ್ ಮತ್ತು ಪೂಜಾ ಸರಳಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿಶೇಷವೆಂದ್ರೆ ಮಂತ್ರ ಮಾಂಗಲ್ಯ ದ ಮೂಲಕವೇ ಪೂಜಾ ಮದುವೆ ಆಗುತ್ತಿದ್ದಾರೆ. ಇವರ ಮದುವೆಯ ಬೆಂಗಳೂರಿನ ಯಲಹಂಕದಲ್ಲಿಯೇ ನಡೆಯಲಿದೆ. ಇಷ್ಟು ಮಾಹಿತಿ ಸದ್ಯ ಹರಿದಾಡುತ್ತಿದೆ. ಪೂಜಾ ಗಾಂಧಿ ಆಗಲಿ, ಪೂಜಾ ಗಾಂಧಿ ಅವರ ಆಪ್ತರೇ ಇರಲಿ, ಇವರಾರೂ ಈ ಬಗ್ಗೆ ಎಲ್ಲೂ ಏನೂ ಹೇಳಿಕೊಂಡಿಲ್ಲ. ಆದರೂ ಇವರ ಈ ಮದುವೆ ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿದೆ.

Leave a Comment

Your email address will not be published. Required fields are marked *