ಸಮಗ್ರ ನ್ಯೂಸ್: ಮೈಸೂರಿನಲ್ಲಿ ಮಾಧ್ಯಮದವರಿಗೆ ಹೇಳಿಕೆ ನೀಡಿದ ಸಂಸದ ಈ ಬಾರಿ ಜೆಡಿಎಸ್ ಕೂಡ ಬಿಜೆಪಿ ಜತೆ ಮೈತ್ರಿಯಾಗಿದೆ. ಜೆಡಿಎಸ್ ಸಹಕಾರ ನೀಡಿರುವುದು ಬಿಜೆಪಿಗೆ ಮತ್ತಷ್ಟು ಬಲಬಂದಂತಾಗಿದೆ. ಎಲ್ಲಾ ಪಕ್ಷಗಳಲ್ಲಿಯೂ ಮೋದಿ ಅವರ ಅಭಿಮಾನಿಗಳಿದ್ದಾರೆ.
ಮೋದಿ ಅವರು ದೇಶಕ್ಕಾಗಿ ಮಾಡಿರುವ ಕಾಯ೯ಗಳು, ಯೋಜನೆಗಳನ್ನು ಮೆಚ್ಚಿರುವ ಜನ ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ಇವರೆಲ್ಲರ ಸಹಕಾರ ಬಿಜೆಪಿಗೆ ಮತ್ತೊಮ್ಮೆ ದೊರಕಲಿದೆ. ಹೀಗಾಗಿ 2 ಲಕ್ಷ ಮತಗಳ ಅಂತರದ ಗೆಲವು ಸುಲಭ ಸಾಧ್ಯವಾಗಲಿದೆ. ಡಿಸೆಂಬರ್ ನಲ್ಲಿ ಮೈಸೂರು – ಕುಶಾಲನಗರ ಚತುಷ್ಪಥ ಹೈವೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.