ಕೊಡಗಿನಲ್ಲಿ ಕಾಡಾನೆಗಳ ಹಾವಳಿ| ಮನೆಯಂಗಳದಲ್ಲಿ ವಾರ್ಕಿಂಗ್ ಮಾಡುತ್ತಿರುವ ಕಾಡಾನೆಗಳು

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಬೇಟೋಳ್ಳಿ ಗ್ರಾಮದದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ ಕಾಡಾನೆಗಳ ಹಿಂಡು ಕಾಡಿನಿಂದ ನಾಡಿಗೆ ಬಂದು ತೋಟಕ್ಕೆ ತೋಟದಿಂದ ಮನೆಯಂಗಳಕ್ಕೆ ಬಂದು ಉಪಟಳ ನೀಡಲು ಆರಂಭಿಸಿದೆ.

Ad Widget ... ..

ಬೇಟೋಳ್ಳಿ ಗ್ರಾಮದಲ್ಲಿ ಸುಮಾರು 4 ಕಾಡಾನೆಗಳು ಕಾಣಿಸಿಕೊಂಡಿದ್ದು ಕಳೆದ ಮೂರು ದಿನಗಳಿಂದ ರಸ್ತೆಯಲ್ಲಿ ಸಂಚಾರಿಸುತ್ತಿದೆ. ಮಾತ್ರವಲ್ಲ ಸ್ಥಳಿಯ ಡಿ.ಎಚ್.ಎಸ್.ಮಿಲ್ ಆವರಣದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಕಾರುಗಳ ಪಕ್ಕದಲ್ಲಿ ಸ್ವಲ್ಪ ಹೊತ್ತು ಅಡ್ಡಾಡಿದ 2 ಕಾಡಾನೆಗಳು ಯಾವುದೇ ಹಾನಿ ಮಾಡದೆ ಮರಳಿದೆ ಆನೆಗಳ ಹಿಂಡು ಇಲ್ಲಿನ ಶ್ರೀ ಭದ್ರಕಾಳಿ ದೇವಸ್ಥಾನದ ಸಮೀಪದಲ್ಲೇ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

Ad Widget

ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗಟ್ಟುವ ಪ್ರಯತ್ನದಲ್ಲಿದ್ದಾರೆ. ಕಾಡಾನೆ ಹಾವಳಿ ತಡೆಗೆ ಸರಕಾರ ಶಾಶ್ವತ ಪರಿಹಾರ ಸೂಚಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *