Ad Widget .

ಇತಿಹಾಸ ಬರೆದ ಬೆಂಗಳೂರು ”ರಾಜ-ಮಹಾರಾಜ” ಜೋಡುಕರೆ ಕಂಬಳ| ಇಲ್ಲಿದೆ ಸಂಪೂರ್ಣ ಫಲಿತಾಂಶ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆದ ಎರಡು ದಿನಗಳ ಕಂಬಳ ಉತ್ಸವಕ್ಕೆ ಭಾನುವಾರ ಅದ್ದೂರಿಯಾಗಿ ತೆರೆ ಬಿದ್ದಿದೆ. ಒಟ್ಟು 8 ಲಕ್ಷ ಜನ ಕಂಬಳ ವೀಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ಹಾಗಾದರೆ ಈ ಕಂಬಳದ ಫಲಿತಾಂಶ ಏನು ಎಂಬುದನ್ನು ತಿಳಿಯೋಣ…

Ad Widget . Ad Widget .

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ-ಮಹಾರಾಜ ಜೋಡುಕೆರೆ ಕಂಬಳ ಚರಿತ್ರಾರ್ಹ ಎಂದೆನಿಸಿದೆ. ಭಾನುವಾರ ಒಂದೇ ದಿನ 3 ಲಕ್ಷಕ್ಕೂ ಅಧಿಕ ಮುಂದೆ ಕಂಬಳವನ್ನು ಕಣ್ಣು ತುಂಬಿಕೊಂಡರು. ಶನಿವಾರ ಎರಡು ಲಕ್ಷಕ್ಕೂ ಹೆಚ್ಚು ಕಂಬಳಾಭಿಮಾನಿಗಳು ಸೇರಿದ್ದರು.

Ad Widget . Ad Widget .

ಭಾನುವಾರ ಮುಂಜಾನೆಯಿಂದಲೇ ಬೆಂಗಳೂರಿನ ನಾಲ್ಕು ದಿಕ್ಕಿನಿಂದ ಅಭಿಮಾನಿಗಳ ದಂಡೇ ದಾಂಗುಡಿ ಇಡತೊಡಗಿತ್ತು. ಪರಿಚಯ ಮಾಡಿಕೊಂಡಾಗ ತಮ್ಮದು ಕೆಂಗೇರಿ, ಯಶವಂತಪುರ, ಹೆಬ್ಬಾಳ, ಸರ್ಜಾಪುರ ಮೊದಲಾದ ಹೆಸರುಗಳನ್ನು ಹೇಳುತ್ತಿದ್ದರು.

ರಾಜ-ಮಹಾರಾಜ ಜೋಡುಕೆರೆ ಕಂಬಳದ ಎರಡನೇ ದಿನವಾದ ಭಾನುವಾರ ನೇಗಿಲು ಕಿರಿಯ ವಿಭಾಗದಲ್ಲಿ ಜೈ ತುಳುನಾಡು ಕೋಣಗಳು 9.09 ಸೆಕೆಂಡುಗಳಲ್ಲಿ ಓಡುವ ಮೂಲಕ ಹೊಸ ದಾಖಲೆಗೆ ಬರೆದವು. ಶನಿವಾರ ಹಗ್ಗ ಹಿರಿಯ ವಿಭಾಗದಲ್ಲಿ ಚಾನ್ಸ್ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಕೋಣಗಳು 9.47 ಸಕೆಂಡ್ ಗಳಲ್ಲಿ ಓಡುವ ಮೂಲಕ ಮೊದಲ ದಿನದ ದಾಖಲೆ ಮಾಡಿದ್ದವು.

ಇನ್ನೂ ಭಾನುವಾರದ ಜೈ ತುಳುನಾಡು ಅವರ ನೇಗಿಲು ಕಿರಿಯ ವಿಭಾಗದ ಕೋಣಗಳು ಮುರಿದು ಬೆಂಗಳೂರು ಕಂಬಳದಲ್ಲಿ ಹೊಸ ರೆಕಾರ್ಡ್ ಬರೆದವು. ಈ ಕೋಣಗಳನ್ನು ಕಕ್ಕೆಪದವು ಕೃತಿಕ್ ಗೌಡ ಓಡಿಸಿದರು. ಹೊಸ ದಾಖಲೆ ಘೋಷಣೆಯಾಗುತ್ತಿದ್ದಂತೆ ಕಂಬಳಾಭಿಮಾನಿಗಳು ಸಂಭ್ರಮಿಸಿದರು.

ಬೆಂಗಳೂರು ಕಂಬಳದ ನೇಗಿಲು ಕಿರಿಯ ವಿಭಾಗ 62, ನೇಗಿಲು ಹಿರಿಯ 31, ಹಗ್ಗ ಕಿರಿಯ 31, ಹಗ್ಗ ಹಿರಿಯ 31, ಕನೆಹಲಗೆ 8, ಅಡ್ಡ ಹಲಗೆ ವಿಭಾಗದಲ್ಲಿ 6 ಸೇರಿದಂತೆ ಒಟ್ಟು 259 ಜತೆ ಕೋಣಗಳು ಭಾಗಿಯಾಗಿದ್ದವು.

ಹೀಗಿದೆ ಬೆಂಗಳೂರು “ರಾಜ – ಮಹಾರಾಜ” ಜೋಡುಕರೆ ಕಂಬಳ ಕೂಟದ ಫಲಿತಾoಶ…
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 07 ಜೊತೆ
ಅಡ್ಡಹಲಗೆ: 06 ಜೊತೆ
ಹಗ್ಗ ಹಿರಿಯ: 21 ಜೊತೆ
ನೇಗಿಲು ಹಿರಿಯ: 32 ಜೊತೆ
ಹಗ್ಗ ಕಿರಿಯ: 31 ಜೊತೆ
ನೇಗಿಲು ಕಿರಿಯ: 62 ಜೊತೆ
ಒಟ್ಟು ಕೋಣಗಳ ಸಂಖ್ಯೆ: 159 ಜೊತೆ

ಕನೆಹಲಗೆ:
( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )
ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ “ಬಿ”
ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್

ಅಡ್ಡ ಹಲಗೆ:
ಪ್ರಥಮ: ಎಸ್. ಎಮ್. ಎಸ್ ಫ್ಯಾಮಿಲಿ ಬೆಂಗಳೂರು
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಸಿ”
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್

ಹಗ್ಗ ಕಿರಿಯ:
ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ
ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ “ಎ”
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

ನೇಗಿಲು ಹಿರಿಯ:
ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ
ಓಡಿಸಿದವರು: ಸರಪಾಡಿ ಧನಂಜಯ ಗೌಡ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಪಟ್ಟೆ ಗುರು ಚರಣ್

ನೇಗಿಲು ಕಿರಿಯ:
ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

Leave a Comment

Your email address will not be published. Required fields are marked *