Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರದ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Ad Widget . Ad Widget .

ಮೇಷ:
ಉದ್ಯೋಗದಲ್ಲಿ ಒತ್ತಡ ಹೆಚ್ಚಾಗುವುದರಿಂದ ಮಾನಸಿಕ ಆತಂಕ ಹೆಚ್ಚುತ್ತದೆ. ದೀರ್ಘಾವಧಿಯ ಹೂಡಿಕೆಯಿಂದ ಸಾಕಷ್ಟು ಲಾಭ ದೊರೆಯುತ್ತದೆ. ಮನೆಯ ಹಿರಿಯರ ಸಲಹೆ ಪಡೆದು ಪ್ರಮುಖ ನಿರ್ಧಾರ ತೆಗೆದುಕೊಳ್ಳಿ. ಕುಟುಂಬ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ವೃತ್ತಿಜೀವನದಲ್ಲಿ ಹಿರಿಯರ ಮಾರ್ಗದರ್ಶನ ದೊರೆಯುವ ಕಾರಣ ಯಾವುದೇ ತೊಂದರೆ ಕಂಡು ಬರದು. ವಿದ್ಯಾರ್ಥಿಗಳು ಕಷ್ಟಪಟ್ಟು ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಬೇಸರದಿಂದ ಹೊರಬರಲು ಆತ್ಮೀಯರೊಂದಿಗೆ ಪ್ರವಾಸಕ್ಕೆ ತೆರಳುವಿರಿ. ಹಣಕಾಸಿನ ವಿಚಾರದಲ್ಲಿ ಧನಾತ್ಮಕ ಬದಲಾವಣೆಗಳು ಎದುರಾಗಲಿವೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ.

Ad Widget . Ad Widget .

ವೃಷಭ:
ಆರೋಗ್ಯ ಸುಧಾರಿಸಲು ಯೋಗ ಪ್ರಾಣಾಯಾಮದ ಮೊರೆ ಹೋಗುವಿರಿ. ಕೋಪ ತೊರೆದು ಸಹನೆಯಿಂದ ಇರಲು ಪ್ರಯತ್ನಿಸಿ. ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಕೊರತೆ ಅನುಭವಿಸುವ ಸಾಧ್ಯತೆಯಿದೆ. ಹಣದ ವಹಿವಾಟಿನ ಬಗ್ಗೆ ಸಾಧ್ಯವಾದಷ್ಟು ಜಾಗರೂಕರಾಗಿರಿ. ಕುಟುಂಬದಲ್ಲಿ ಸಂಭ್ರಮ ಮತ್ತು ಸಂತೋಷ ತುಂಬಿರುತ್ತದೆ. ಉದ್ಯೋಗದಲ್ಲಿ ಆತಂಕದ ಕ್ಷಣಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದೊಂದಿಗೆ ದೀರ್ಘಕಾಲದ ಪ್ರಯಾಣಕ್ಕೆ ಯೋಜನೆ ರೂಪಿಸುವಿರಿ. ಆತ್ಮೀಯರೊಂದಿಗೆ ಸಮಯ ಕಳೆಯುವ ಅವಕಾಶ ದೊರೆಯುತ್ತದೆ. ಪರೀಕ್ಷೆಯಲ್ಲಿ ಯಶಸ್ಸು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ವಂಶಾಧಾರಿತ ಉದ್ಯೋಗ ಆರಂಭಿಸಿ ಯಶಸ್ಸು ಪಡೆಯುವಿರಿ.

ಮಿಥುನ:
ಆರೋಗ್ಯದ ದೃಷ್ಟಿಯಿಂದ ಆಹಾರ ಸೇವನೆಯಲ್ಲಿ ಮಿತಿ ಇರಲಿ. ಉತ್ತಮ ಗುಣವಿರುವ ಜನರೊಂದಿಗೆ ಸ್ನೇಹ ಪ್ರಾರಂಭವಾಗುತ್ತದೆ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳು ಸಂಭವಿಸುತ್ತವೆ. ಸೃಜನಶೀಲತೆಯಿಂದ ಎಲ್ಲರ ಪ್ರೀತಿ ವಿಶ್ವಾಸವನ್ನು ಗೆಲ್ಲುವಿರಿ. ಹಣಕಾಸಿನ ಯೋಜನಗಳ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಹಣದ ಸಮಸ್ಯೆಯೊಂದನ್ನು ಮಾತುಕತೆ ಮೂಲಕ ಪರಿಹರಿಸುವಿರಿ. ಕುಟುಂಬದ ಸದಸ್ಯರೊಂದಿಗೆ ಆಸ್ತಿ ವಿಚಾರದಲ್ಲಿ ವಾದ ವಿವಾದ ಇರುತ್ತದೆ. ಒತ್ತಡದ ಸನ್ನಿವೇಶದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ವೃತ್ತಿಜೀವನದಲ್ಲಿ ಉನ್ನತ ಮಟ್ಟ ತಲುಪುವಿರಿ. ಶಕ್ತಿ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶವೊಂದು ದೊರೆಯಲಿದೆ.

ಕಟಕ:
ಮಾನಸಿಕ ಒತ್ತಡವಿದ್ದರೂ ಆರೋಗ್ಯವಾಗಿ ಬಾಳುವಿರಿ. ವೈಯಕ್ತಿಕ ಸಾಧನೆಗೆ ಹೆಚ್ಚಿನ ಒಲವು ನೀಡುವಿರಿ. ಆದಾಯ ಮತ್ತು ಖರ್ಚು ವೆಚ್ಚದ ನಡುವೆ ಸರಿಯಾದ ಸಮತೋಲನ ಕಾಪಾಡಿಕೊಳ್ಳುವಿರಿ. ಕೌಟುಂಬಿಕ ಕಲಹದಿಂದ ಆಧ್ಯಾತ್ಮಿಕ ಪ್ರಭಾವಕ್ಕೆ ಒಳಗಾಗುವಿರಿ. ಹಿರಿಯ ಅಧಿಕಾರಿಗಳಿಂದ ಉತ್ತೇಜನಕಾರಿ ಮಾರ್ಗದರ್ಶನ ದೊರೆಯುತ್ತದೆ. ಬೇರೆಯವರು ಅಪೂರ್ಣಗೊಳಿಸಿದ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಸಂಬಂಧದಲ್ಲಿ ವಿವಾಹವಾಗಲಿದೆ. ಮಕ್ಕಳೊಂದಿಗೆ ಪ್ರವಾಸ ಕೈಗೊಳ್ಳುವಿರಿ. ಸಂಗಾತಿಯ ವ್ಯಾಪಾರ ವ್ಯವಹಾರಗಳಿಗೆ ಪೂರ್ಣ ಸಹಕಾರ ನೀಡುವಿರಿ ಸ್ವಂತ ಬಳಕೆಗಾಗಿ ಹೊಸ ವಾಹನ ಕೊಳ್ಳುವ ಸಾಧ್ಯತೆಗಳಿವೆ.

ಸಿಂಹ:
ಮಾನಸಿಕ ಒತ್ತಡದಿಂದ ಬಳಲುವಿರಿ. ವ್ಯವಹಾರವು ಸ್ಥಿರವಾಗಿರುವುದಿಲ್ಲ. ಮಾತನಾಡುವಾಗ ಯಾರ ಮನಸ್ಸನ್ನು ನೋಯಿಸದಿರಿ. ಸ್ವಂತ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸ್ವಂತ ಉದ್ದಿಮೆ ಇದ್ದಲ್ಲಿ ಕಾರ್ಮಿಕರನ್ನುಚೆನ್ನಾಗಿ ನೋಡಿಕೊಳ್ಳಿ. ಸಮಾಜದಲ್ಲಿ ಹೆಚ್ಚು ನೆನಪಿನಲ್ಲಿಟ್ಟುಕೊಳ್ಳಬೇಕಾದ ವ್ಯಕ್ತಿಯಾಗಿ ಬಾಳುವಿರಿ. ನ್ಯಾಯಯುತ ಮಾರ್ಗದಲ್ಲಿ ಹಣ ಗಳಿಸಲು ಯೋಜನೆ ರೂಪಿಸುವಿರಿ. ಸ್ಪರ್ಧಾತ್ಮಕ ಮನೋಭಾವ ಅನಿರೀಕ್ಷಿತ ಯಶಸ್ವಿಗೆ ಕಾರಣವಾಗುವುದು. ಹೆಚ್ಚಿನ ಪ್ರಯತ್ನದಿಂದ ವಿದ್ಯಾರ್ಥಿಗಳು ಯಶಸ್ಸು ಪಡೆಯುತ್ತಾರೆ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ.

ಕನ್ಯಾ:
ಮಹಿಳೆಯರ ಆರೋಗ್ಯದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಬಹುದು. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಜೀವನದಲ್ಲಿ ಹಣದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವಿರಿ. ಜವಾಬ್ದಾರಿಯುತ ವ್ಯಕ್ತಿಯಂತೆ ವರ್ತಿಸಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಶುಭಸುದ್ದಿ ಕೇಳಲಿದ್ದೀರಿ. ಸ್ನೇಹಿತರೊಂದಿಗೆ ಸಂತೋಷಕೂಟ ಆಚರಿಸುತ್ತೀರಿ. ತೆಗೆದುಕೊಳ್ಳುವ ತೀರ್ಮಾನವೊಂದು ಕುಟುಂಬ ಸದಸ್ಯರನ್ನು ಅಸಮಾಧಾನಗೊಳಿಸುತ್ತದೆ. ಅನಿರೀಕ್ಷಿತವಾಗಿ ಭೇಟಿಯಾಗಲು ಬರುವ ವಿಶೇಷ ವ್ಯಕ್ತಿ ಜೀವನದ ಹಾದಿಯನ್ನು ಬದಲಿಸುತ್ತಾರೆ. ಎದುರಾಗುವ ಸವಾಲುಗಳನ್ನು ಜಯಿಸುವಿರಿ. ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳುತ್ತಾರೆ. ದುಡುಕಿನ ನಿರ್ಧಾರಗಳು ತೊಂದರೆ ಉಂಟುಮಾಡಬಹುದು.

ತುಲಾ:
ಅಜೀರ್ಣದ ತೊಂದರೆ ಕಾಡುತ್ತದೆ. ಉತ್ತಮ ಆರೋಗ್ಯ ಗಳಿಸಲು ನಿಯಮಿತ ಯೋಗ ಪ್ರಾಣಾಯಾಮದ ಅವಶ್ಯಕತೆ ಇದೆ. ಹಳೆಯ ಹಣಕಾಸಿನ ವ್ಯವಹಾರದಿಂದ ಉತ್ತಮ ಆದಾಯವಿದೆ. ಯಾವುದೇ ಹೊಸ ಹಣಕಾಸಿನ ವ್ಯವಹಾರ ಆರಂಭಿಸದಿರಿ. ಸಮಾಜದ ಗಣ್ಯ ವ್ಯಕ್ತಿಯ ಸಲಹೆ ಸಹಕಾರ ದೊರೆಯುತ್ತದೆ. ವೃತ್ತಿಜೀವನದ ಉನ್ನತ ಮಟ್ಟ ತಲುಪಲು ಹಿರಿಯ ಅಧಿಕಾರಿಗಳು ಸಹಾಯ ಮಾಡುತ್ತಾರೆ. ಕುಟುಂಬದ ಭೂವಿವಾದ ಪರಿಹಾರವಾಗುತ್ತದೆ. ಎಲ್ಲರ ಮೆಚ್ಚುಗೆಯನ್ನು ಗಳಿಸುವಿರಿ. ವಿದ್ಯಾರ್ಥಿಗಳು ವಿಶೇಷವಾಗಿ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ಕಿರು ಪ್ರವಾಸ ಕೈಗೊಳ್ಳುವಿರಿ.

ವೃಶ್ಚಿಕ:
ಆತ್ಮಶಕ್ತಿಯಿಂದ ಯಾವುದೇ ಸಮಸ್ಯೆಯನ್ನು ಪರಿಹರಿಸಬಲ್ಲಿರಿ. ಕುಟುಂಬದಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಕಿರಿಕಿರಿ ಉಂಟಾಗುತ್ತದೆ. ಶಾಂತಿ ಸಂಯಮದಿಂದ ವರ್ತಿಸಬೇಕಾದ ಅವಶ್ಯಕತೆ ಇದೆ. ಅನಾವಶ್ಯಕವಾಗಿ ಹಣ ಖರ್ಚು ಮಾಡುತ್ತೀರಿ. ಕುಟುಂಬದ ಸದಸ್ಯರು ಹಣಕಾಸಿನ ಸಹಾಯವನ್ನು ಕೇಳುತ್ತಾರೆ. ಕೌಟುಂಬಿಕ ಸಂಬಂಧಗಳಲ್ಲಿ ಅಂತರ ಉಂಟಾಗುತ್ತದೆ. ಕ್ರಮೇಣವಾಗಿ ಕುಟುಂಬದಲ್ಲಿ ಗೌರವ ಹೆಚ್ಚುವ ಕೆಲಸ ಮಾಡುವಿರಿ. ವಿದ್ಯಾರ್ಥಿಗಳಿಗೆ ವಿಶೇಷವಾದ ಅನುಕೂಲತೆಗಳು ದೊರೆಯಲಿವೆ. ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆಯುವಿರಿ. ರಾಜಕೀಯ ಕ್ಷೇತ್ರದಲ್ಲಿ ಸದಾ ಕಾಲ ಸಕ್ರಿಯವಾಗಿರುತ್ತೀರಿ. ಅನಿವಾರ್ಯವಾಗಿ ಸಂಬಂಧಿಕರೊಬ್ಬರಿಗೆ ಹಣದ ಸಹಾಯ ಮಾಡುವಿರಿ.

ಧನಸ್ಸು:
ಬಿಡುವಿಲ್ಲದ ಕೆಲಸ ಕಾರ್ಯದ ನಡುವೆ ವಿಶ್ರಾಂತಿ ಪಡೆಯುವಿರಿ. ಕುಟುಂಬದ ಹಣಕಾಸಿನ ವಿಚಾರವಾಗಿ ಮಾನಸಿಕ ಒತ್ತಡ ಅನುಭವಿಸುವಿರಿ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ದೈಹಿಕ ನಿಶಕ್ತಿಯಿಂದ ಪಾರಾಗಲು ವಿಶ್ರಾಂತಿ ಪಡೆಯುವಿರಿ. ಕಷ್ಟಕರ ಕೆಲಸ ಕಾರ್ಯಗಳಿಂದ ದೂರವಿರುವುದು ಒಳ್ಳೆಯದು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಮನೆಯನ್ನು ಅಲಂಕರಿಸಲು ಬೇಕಾದ ವಸ್ತುವನ್ನು ಖರೀದಿಸುವಿರಿ. ಕುಟುಂಬದ ಸದಸ್ಯರು ಧಾರ್ಮಿಕ ಸ್ಥಳಕ್ಕೆ ಪ್ರವಾಸ ಕೈಗೊಳ್ಳುತ್ತಾರೆ. ಕುಟುಂಬ ಸಂಬಂಧಿತ ಸಮಸ್ಯೆಗಳು ಕ್ರಮೇಣವಾಗಿ ಬಗೆ ಹರಿಯುತ್ತದೆ.

ಮಕರ:
ಗಂಟಲು ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಗಳನ್ನು ಎದುರಿಸುವಿರಿ. ಕುಟುಂಬಕ್ಕೆ ಸಂಬಂಧಿಸಿದ ಹಣಕಾಸಿನ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಕ್ರಿಷ್ಟಕರ ಪರಿಸ್ಥಿತಿಯಲ್ಲಿಯೂ ಪ್ರಯತ್ನದಲ್ಲಿ ಹಿಂದೆ ಬೀಳುವುದಿಲ್ಲ. ಸಂಪತ್ತನ್ನು ಹೆಚ್ಚಿಸಲು ದೊರೆವ ಅವಕಾಶವನ್ನು ಬಳಸಿಕೊಳ್ಳಿ. ಮಾನಸಿಕ ಒತ್ತಡದಿಂದ ಏಕಾಂಗಿಯಾಗಿರಲು ಬಯಸುವಿರಿ. ಮಾರುಕಟ್ಟೆಯಲ್ಲಿನ ಹೂಡಿಕೆಗಳನ್ನು ಬಲಪಡಿಸಲು ಹೆಚ್ಚಿನ ಹಣ ಖರ್ಚು ಮಾಡುವಿರಿ. ಹಣಕಾಸಿಗೆ ಸಂಬಂಧಿಸಿದ ಪ್ರಮುಖ ಕೆಲಸವನ್ನು ಪ್ರಾರಂಭಿಸುವ ಮೊದಲು ತಂದೆಯ ಸಲಹೆಯನ್ನು ಕೇಳಿ. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಗಳಿಸುವಿರಿ. ವಿವಾಹ ಯೋಗವಿದೆ, ದಾಂಪತ್ಯದಲ್ಲಿದ್ದ ಸಮಸ್ಯೆ ಕ್ರಮೇಣವಾಗಿ ದೂರವಾಗಲಿದೆ.

ಕುಂಭ:
ಅನಿರೀಕ್ಷಿತ ಸಮಸ್ಯೆಗಳು ಎದುರಾದಾಗ ಸಮಯವನ್ನು ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವಿರಿ. ದೊಡ್ಡ ಪ್ರಮಾಣದ ಹಣಕಾಸಿನ ಸಹಾಯ ದೊರೆಯುತ್ತದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೀರಿ. ಪಾಲುಗಾರಿಕೆ ವ್ಯಾಪಾರ ಇದ್ದಲ್ಲಿ ಹೊಸ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ನೇಹಿತರು ಮತ್ತು ಕುಟುಂಬದ ಬೆಂಬಲ ಗಳಿಸುವಿರಿ. ವೃತ್ತಿಯಲ್ಲಿ ಕಿರಿಯ ಸಹೋದ್ಯೋಗಿಗಳಿಂದ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳು ಸಮಯ ಪ್ರಜ್ಞೆಯಿಂದ ಸಮಸ್ಯೆಯೊಂದನ್ನು ದೂರ ಮಾಡುತ್ತಾರೆ. ವ್ಯಾಪಾರ ವ್ಯವಹಾರಗಳನ್ನು ಉತ್ತಮಗೊಳಿಸಲು ಹೆಚ್ಚಿನ ಹಣದ ಅಗತ್ಯಗತೆ ಇದೆ.

ಮೀನ:
ಮಾನಸಿಕ ಖಿನ್ನತೆ ಅಥವಾ ಒತ್ತಡ ಬಹುವಾಗಿ ಕಾಡುತ್ತದೆ. ಮನಸ್ಸಿನಲ್ಲಿ ಒಂದು ರೀತಿಯ ಭಯ ಮನೆ ಮಾಡಿರುತ್ತದೆ. ಮತ್ತೆ ಮನಸ್ಸಿನ ಶಾಂತಿ ಗಳಿಸಲು ಯೋಗ ಧ್ಯಾನದ ಮಾರ್ಗವನ್ನು ಅನುಸರಿಸುವಿರಿ. ಸದಾ ಕಾಲ ಕಾರ್ಯನಿರತರಾದರೆ ಆತ್ಮಸ್ಥೈರ್ಯ ಹೆಚ್ಚುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕುಟುಂಬದ ಹಿರಿಯರ ಆರೋಗ್ಯ ಕಾಪಾಡಲು ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು. ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಲು ಕಿರು ವ್ಯಾಪಾರ ಆರಂಭಿಸುವಿರಿ. ಕುಟುಂಬ ಸದಸ್ಯರು ಪ್ರೀತಿ ವಿಶ್ವಾಸ ತೋರುತ್ತಾರೆ. ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು.

Leave a Comment

Your email address will not be published. Required fields are marked *