ಕಾರವಾರ: ಸಮುದ್ರಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

ಸಮಗ್ರ ನ್ಯೂಸ್: ಮಕ್ಕಳನ್ನು ಬಸ್‌ನಿಲ್ದಾಣದಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಡ್‌ ಬಂದರ್ ಬಳಿ ಸಮುದ್ರದಲ್ಲಿ ನ. 25ರಂದು ಸಂಜೆ ನಡೆದಿದೆ.

Ad Widget ... ..

ಮೃತ ನಿವೇದಿತಾ ನಾಗರಾಜ ಭಂಡಾರಿ ಸಾಂತಗಲ್ ಗ್ರಾಮದ ನಿವಾಸಿಯಾಗಿದ್ದು, ನಿವೇದಿತಾ, ಮನೆಯಿಂದ ಸ್ಕೂಟಿಯಲ್ಲಿ ಇಬ್ಬರೂ ಗಂಡು ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಕುಮಟಾದ ಪಿಕ್‌ಅಪ್ ಬಸ್‌ ನಿಲ್ದಾಣದ ಬಳಿ ಮಕ್ಕಳನ್ನು ಬಿಟ್ಟು ತೆರಳಿದ್ದಾರೆ.

Ad Widget

ಇನ್ನು, ಆತ್ಮಹತ್ಯೆಗೂ ಮುನ್ನ ಸ್ಕೂಟಿಯಲ್ಲಿ ಮಾಂಗಲ್ಯ, ಕಾಲುಂಗುರ, ಮೊಬೈಲ್ ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ಇದೇ ವೇಳೆ ಹಿಳೆ ಸಮುದ್ರಕ್ಕೆ ಹಾರುವುದನ್ನ ಗಮನಿಸಿದ ಲೈಫ್‌ಗರ‍್ಡ್ ಸಿಬ್ಬಂದಿ ಶಕ್ತಿ ಮೀರಿ ಮಹಿಳೆಯ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಆದರೆ ಅಲೆಗಳ ಅಬ್ಬರ ಹೆಚ್ಚಿದ್ದ ಹಿನ್ನಲೆಯಲ್ಲಿ ಸಮುದ್ರಕ್ಕೆ ಹಾರಿದ ಕೆಲ ಕ್ಷಣಗಳಲ್ಲೇ ಆಕೆ ಕಣ್ಮರೆಯಾಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಕುಮಟಾ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Leave a Comment

Your email address will not be published. Required fields are marked *