Ad Widget .

ಆಟಗಾರರ ಬದಲಾವಣೆಗೆ ಇಂದು ಕೊನೆಯ ದಿನ/ ಆರ್‍ಸಿಬಿಯಲ್ಲೂ ಒಂದು ಬದಲಾವಣೆ

ಸಮಗ್ರ ನ್ಯೂಸ್: ಐಪಿಎಲ್ ಟೂರ್ನಿಗೆ ಎಲ್ಲಾ ತಂಡಗಳು ಸಿದ್ದತೆ ನಡೆಸುತ್ತಿದ್ದು. ಅದಕ್ಕೂ ಮುನ್ನ ಆಟಗಾರರ ಹರಾಜು ಪಕ್ರಿಯೆ ನಡೆಯಲಿದೆ, ಇಂದು ಆಟಗಾರರ ಬದಲಾವಣೆಗೆ ಕಡೆಯ ದಿನವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಲ್‍ರೌಂಡರ್ ಶೆಹಬಾಜ್ ಅಹಮದ್ ಅವರನ್ನು ಸನ್‍ರೈಸರ್ಸ್ ಹೈದರಾಬಾದ್‍ಗೆ ನೀಡಿ, ಅಲ್ಲಿಂದ ಮಯಾಂಕ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

Ad Widget . Ad Widget .

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶೆಹಬಾಜ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಶೆಹಬಾಜ್ ಅಹಮದ್ 10 ಪಂದ್ಯಗಳನ್ನಾಡಿ ಕೇವಲ 42 ರನ್ ಗಳನ್ನಷ್ಟೇ ಬಾರಿಸಿದ್ದರು. ಬೌಲಿಂಗ್‍ನಲ್ಲಿ ಕೇವಲ ಒಂದು ವಿಕೆಟ್ ಕಬಳಿಸಲು ಸಫಲರಾಗಿದ್ದರು.

Ad Widget . Ad Widget .

ಇನ್ನೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ ಮಯಾಂಕ್ ಇದೀಗ ಆರ್‍ಸಿಬಿ ತೆಕ್ಕೆಗೆ ಬಂದಿದ್ದಾರೆ. ಈ ಮೊದಲು ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್) ಹಾಗೂ ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ ಆವೃತ್ತಿಯ ಐಪಿಎಲ್‍ನಲ್ಲಿ ಮಯಾಂಕ್ ಡಾಗರ್ ಕೇವಲ 3 ಪಂದ್ಯಗಳನ್ನಾಡಿ ಒಂದು ವಿಕೆಟ್ ಕಬಳಿಸಿದ್ದರು.

Leave a Comment

Your email address will not be published. Required fields are marked *