ಸಮಗ್ರ ನ್ಯೂಸ್: ಸವಣೂರಿನ ಫಾರ್ಮ್ಸ್ ಒಂದರಿಂದ ಅಡಕೆ ಕಳ್ಳತನಕ್ಕೆ ಇಬ್ಬರ ತಂಡ ವಾಹನದಲ್ಲಿ ಬಂದಿದ್ದು ಅಡಿಕೆ ದೋಚುವ ಸಂದರ್ಭದಲ್ಲಿ ಫಾರ್ಮ್ ಮಾಲೀಕನ ಪುತ್ರನ ಕೈಗೆ ಸಿಕ್ಕಿಬಿದ್ದ ಸಂದರ್ಭ ತಲವಾರು ದಾಳಿ ನಡೆಸಿ ಮಾಲೀಕರ ಪುತ್ರನನ್ನು ಗಾಯಗೊಳಿಸಿದ ಪ್ರಕರಣಕ್ಕೆ ನಡೆದಿದೆ.
ಎಡಪತ್ಯ ಫಾರ್ಮ್ಸ್ ಮಾಲೀಕ ರಾಮಚಂದ್ರ ಎಡಪತ್ಯ ಅವರ ಪುತ್ರ ನಿಷ್ಕಲ್ ರಾಮ್ ಎಡಪತ್ಯ ತಲವಾರು ದಾಳಿ ನಡೆಸಿ ಅಡಿಕೆ ಕಳವು ನಡೆದಿತ್ತು. ಶನಿವಾರ ಬೆಳಿಗ್ಗೆ ಬೇರೊಂದು ಡ್ರೈಯರ್ ನ ಅಡಿಕೆ ತೆರವುಗೊಳಿಸಲು ನೋಡಿದಾಗ ಅದರಲ್ಲಿ ಅಡಿಕೆ ಕಳವು ನಡೆದಿರುವುದು ಬೆಳಕಿಗೆ ಬಂದಿದೆ.
ಡ್ರೈಯರ್ ನ ಸೋಲರ್ ಹರಿದು, ಗೋಡೆಗೆ ಕಟ್ಟಿದ ಕಲ್ಲು ತೆಗೆದು ಅಡಿಕೆ ಕಳವು ನಡೆಸಲಾಗಿದೆ. ಅಂದಾಜು 25 ಗೋಣಿಯಷ್ಟು ಒಣ ಅಡಿಕೆ ಕಳವು ನಡೆದಿದೆ ಎನ್ನಲಾಗಿದೆ. ಬಶೀರ್ ಎಂಬ ಕ್ರಮ ಸಿಕ್ಕಿಬಿದ್ದಿದ್ದು ಹಲವು ದಿನಗಳಿಂದ ನಿರಂತರ ಅಡಕೆ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ.
ಸುಮಾರು ಈಗಾಗಲೇ 5 ಲಕ್ಷಕ್ಕೂ ಅಧಿಕ ಮೊತ್ತದ ಅಡಕೆಯನ್ನು ಸುಲಿದಿಟ್ಟ ಗೋದಾಮು ಹಾಗೂ ಸೋಲಾರ್ ಕೊಠಡಿಯಿಂದ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇನ್ನೋರ್ವ ಕಳ್ಳ ಹಕ್ಕೀಂ ಎಂಬಾತನ ಸೂಚನೆಯ ಮೇರೆಗೆ ಇಲ್ಲಿಗೆ ಆಗಮಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವಿಡಿಯೋದಲ್ಲಿ ಕಳ್ಳ ಒಪ್ಪಿಕೊಂಡಿದ್ದಾನೆ.
ಇರ್ಷಾದ್ ಎಂಬರಿಗೆ ಸೇರಿದ ಕಾರಿನಲ್ಲಿ ಕಳ್ಳರು ಬಂದಿದ್ದು, ಬಶೀರ್ ಎಂಬಾತನನ್ನು ಫಾರ್ಮ್ ಮಾಲೀಕರು ಬೆಳ್ಳಾರೆ ಠಾಣೆಗೆ ಒಪ್ಪಿಸಿದ್ದಾರೆ. ಇದೀಗ ಬೆಳಕಿಗೆ ಬಂದ ಪ್ರಕರಣದಲ್ಲಿ ಅಂದಾಜು ಹೆಚ್ಚುವರಿ 10 ಲಕ್ಷದಷ್ಟು ಅಡಿಕೆ ಕಳ್ಳತನ ನಡೆದಿರಬಹುದು ಎನ್ನಲಾಗಿದೆ.