Ad Widget .

ಸುಬ್ರಹ್ಮಣ್ಯ: ರೋವರ್ ರೇಂಜರ್, ಸ್ಕೌಟ್ಸ್ ಗೈಡ್ಸ್,ಬುಲ್ ಬುಲ್ ಶಿಬಿರದ ಸಮಾರೋಪ ಸಮಾರಂಭ

ಸಮಗ್ರ ನ್ಯೂಸ್: ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಸುಳ್ಯ ದ.ಕ ಇದರ ಸಹಭಾಗಿತ್ವದಲ್ಲಿ ನಡೆದ ರೋವರ್ ರೇಂಜರ್ ಸಮಾಗಮ ಸ್ಕೌಟ್ಸ್ ಗೈಡ್ಸ್ ಕಬ್ ಬುಲ್ ಬುಲ್ ಉತ್ಸವ 2023-2024ರ ಶಿಬಿರದ ಸಮಾರೋಪ ಸಮಾರಂಭದ ಸಮಾರೋಪವು ನ.25 ರಂದು ನಡೆಯಿತು.

Ad Widget . Ad Widget .

ಈ ಸಮಾರಂಭದಲ್ಲಿ ಪ್ರಾದೇಶಿಕ ನಿರ್ದೇಶಕ ವಿಟಿಯು ಬೆಳಗಾವಿ ಡಾ. ಶಿವಕುಮಾರ್ ಹೊಸೊಳಿಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಷ್ಟ ಎನ್ನುವುದು ಪ್ರತಿಯೊಬ್ಬರಿಗೂ ಬಂದು ಹೋಗುತ್ತಾ ಇರುತ್ತದೆ .ಇದನ್ನು ಮೆಟ್ಟಿ ನಿಂತು ಸಾಗುವುದು ನಮ್ಮ ದೊಡ್ಡ ಸವಾಲಾಗಿರುತ್ತದೆ. ಸವಾಲುಗಳನ್ನು ಎದುರಿಸಿಕೊಂಡು ಹೋಗುವ ಪ್ರಾಧಾನ್ಯವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಒದಗಿಸುತ್ತದೆ. ಕಲಿಕೆಯ ಸಂದರ್ಭದಲ್ಲಿ ಮಾತ್ರ ಇದರೊಂದಿಗೆ ಬೆರೆಯುವುದಲ್ಲ ಮುಂದಿನ ಜೀವನದಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಗೆ ಅಬಾರಿಯಾಗಿರಬೇಕು ಸತ್ಯವಂತ ಪ್ರಜೆಯಾಗಿ ಬದುಕನ್ನು ರೂಢಿಸಿಕೊಳ್ಳಬೇಕೆಂದು ಮಾತನಾಡಿದರು.

Ad Widget . Ad Widget .

ನಾಯಕತ್ವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿಕೊಳ್ಳಲ್ಲೆಂದೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉಳಿದುಕೊಳ್ಳುತ್ತಿದೆ. ಹಾಗಾಗಿ ಸಿಕ್ಕ ಅವಕಾಶವನ್ನು ಎಲ್ಲಾ ಬಳಸಿಕೊಂಡು ಸಾಗುವುದು ವಿದ್ಯಾರ್ಥಿಗಳ ಕರ್ತವ್ಯ . ತನ್ನನ್ನು ತಾನು ಕಾರ್ಯದಲ್ಲಿ ತೊಡಗಿಸಿಕೊಂಡು ಸಹೋದರತ್ವ ಭಾವನೆಯನ್ನು ಬೆಳೆಸಿಕೊಳ್ಳುವುದು ಈ ಸಂಸ್ಥೆಯ ಕಾರ್ಯ. ನಾವು ಮಾಡಿದ ಪ್ರತಿಜ್ಞೆಯನ್ನು ಗೌರವದಿಂದ ಪ್ರೀತಿಸಿ ಉಳಿಸಿಕೊಳ್ಳಬೇಕು ಉತ್ತಮ ಸ್ಕೌಟರಾಗಿ ದೇಶ ಸೇವೆ ಮಾಡಬೇಕೆಂದು ಜಿಲ್ಲಾ ಕಾರ್ಯದರ್ಶಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ದ.ಕ ಎಂ ಜಿ ಕಜೆ ತಿಳಿಸಿದರು.

ಸಮಾಜದಲ್ಲಿ ಏನೇ ಆದರೂ ಎದುರಿಸುವ ಶಕ್ತಿ ಸ್ಕೌಟ್ಸ್ ಮತ್ತು ಗೈಡ್ಸ್ ದು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅಧ್ಯಕ್ಷ ಮಾಧವ ಬಿ ಕೆ ಅಧ್ಯಕ್ಷ ನೆಲೆಯಲ್ಲಿ ಶುಭ ಹಾರೈಸಿದರು. ಶಿಬಿರದ ಸಂಪೂರ್ಣ ವರದಿಯನ್ನು ಹಿಮಾಲಯ ವುಡ್ ಬ್ಯಾಡ್ಜ್ ಸ್ಕೌಟ್ಸ್ ಮಾಸ್ಟರ್ ಸುಬ್ರಹ್ಮಣ್ಯ ಕೆ ಎನ್ ನೆರವೇರಿಸಿದರು.

ವೇದಿಕೆಯಲ್ಲಿ ಸೋಮಶೇಖರ್ ನಾಯ್ಕ್ ಪ್ರಾಂಶುಪಾಲ ಎಸ್ ಎಸ್ ಪಿ ಯು ಕಾಲೇಜು ಸುಬ್ರಹ್ಮಣ್ಯ, ನಿವೃತ ದೈಹಿಕ ನಿರ್ದೇಶಕ ಕೆ ಎಸ್ ಎಸ್ ಕಾಲೇಜು ಸುಬ್ರಹ್ಮಣ್ಯ ತುಕಾರಾಂ ಏನೆಕಲ್ಲು,ವೆಂಕಟೇಶ್ ಎಚ್ ಎಲ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ,ಸಂತೋಷ್ ಕುಮಾರ್ ರೈ ಉಪವಲಯ ಅರಣ್ಯಾಧಿಕಾರಿ ಪಂಜ,ತೀರ್ಥರಾಮ್ ಹೆಚ್ ಅಧ್ಯಕ್ಷರು ಸರಕಾರಿ ನೌಕರರ ಸಂಘ ಸುಳ್ಯ,ರವಿ ಕಕ್ಕೆಪದವು ಅನುಗ್ರಹ ಟ್ರಸ್ಟ್ ಸುಬ್ರಹ್ಮಣ್ಯ,ದಿನೇಶ್ ಶಿರಾಡಿ ಅಧ್ಯಕ್ಷರು ಶಿಕ್ಷಕ – ರಕ್ಷಕ ಸಂಘ ಎಸ್ ಎಸ್ ಎಸ್ ಪಿ ಯು ಕಾಲೇಜು ಸುಬ್ರಹ್ಮಣ್ಯ. ಮಾನ್ಯ ಶಾಸಕಿ ವಿಧಾನಸಭಾ ಸುಳ್ಯ ಕು|ಭಾಗೀರತಿ ಮುರುಳ್ಯ, ಸಂಯೋಜಕ ಪ್ರವೀಣ್ ಮುಂಡೋಡಿ, ರಾಜ್ಯ ಸಂಘಟನಾ ಗೈಡ್ಸ್ ಆಯೋಜಕ ಮಂಜುಳಾ,ಜಿಲ್ಲಾ ಎ ಡಿ ಸಿ ವಿಮಲಾ ರಂಗಯ್ಯ ಗೈಡ್ಸ್ ಮತ್ತು ದೇವಿಪ್ರಸಾದ್ ಜಾಕೆ ಸ್ಕೌಟ್ಸ್, ಎ ಎಸ್ ಸಿ ಒ ದಕ್ಷಿಣ ಕನ್ನಡದ ಭರತ್ ರಾಜ್, ಉಪಾಧ್ಯಕ್ಷ ಸೋಮಶೇಖರ್ ನೇರಳಾ, ಎಸ್ ಎಸ್ ಪಿ ಯು ಸುಬ್ರಹ್ಮಣ್ಯ ಪ್ರೌಢಶಾಲಾ ವಿಭಾಗದ ಗಣಿತ ಅಧ್ಯಾಪಕ ಕೃಷ್ಣಭಟ್ ಉಪಸ್ಥಿತರಿದ್ದರು.

ವಿಮಲಾ ರಂಗಯ್ಯ ಸ್ವಾಗತಿಸಿ, ಉದಯ ಕುಮಾರ್ ರೈ ಎಸ್ ಪ್ರಧಾನ ಕಾರ್ಯದರ್ಶಿ ಸ್ಥಳೀಯ ಸಂಸ್ಥೆ ಪಂಜ ವಂದಿಸಿದರು, ಸುಜಯಶ್ರೀ ಕೆ ಪಿ ಎಸ್ ಬೆಳ್ಳಾರೆ ಸ್ಕೌಟ್ ಮಾಸ್ಟರ್ ನಿರೂಪಿಸಿದರು .

Leave a Comment

Your email address will not be published. Required fields are marked *