Ad Widget .

ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕೊರೊನಾ ವ್ಯಾಕ್ಸಿನ್ ಕಾರಣವಲ್ಲ| ಕೊನೆಗೂ ಮೌನ ಮುರಿದ ICMR

ಸಮಗ್ರ ನ್ಯೂಸ್: ಹೃದಯಾಘಾತಕ್ಕೆ ಯುವ ಜನಾಂಗ ಹೆಚ್ಚು ಸಾವನ್ನಪ್ಪುತ್ತಿರುವುದಕ್ಕೆ COVID-19 ವ್ಯಾಕ್ಸಿನೇಷನ್ ಕಾರಣವಲ್ಲ, ಬದಲಾಗಿ ಯುವಜನರಲ್ಲಿ ಹಠಾತ್ ಸಾವು ಜೀವನಶೈಲಿಯ ಬದಲಾವಣೆಗಳಿಂದ ಉಂಟಾಗುತ್ತದೆ. ವ್ಯಾಕ್ಸಿನೇಷನ್ ಗೂ ಹಠಾತ್ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ICMR ಖಚಿತಪಡಿಸಿದೆ.

Ad Widget . Ad Widget .

ಇತ್ತೀಚೆಗೆ ಹೃದಯಾಘಾತದಿಂದ ಯುವಕರು ಸಾವನ್ನಪ್ಪುತ್ತಿರುವುದಕ್ಕೆ ದೇಶದಾದ್ಯಂತ ಕಳವಳ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕೆ ಕಾರಣಗಳೇನು ಎಂಬುದದ ಬಗ್ಗೆ ಇಂಡಿಯನ್ ಕೌನ್ಸಿಲ್ ಆಫ್ ಅಧ್ಯಯನ ನಡೆಸಿತ್ತು.

Ad Widget . Ad Widget .

ಈ ಅಧ್ಯಯನ ಪ್ರಕಾರ ಕೋವಿಡ್-19 ಹಿನ್ನಲೆ ಆಸ್ಪತ್ರೆಗೆ ದಾಖಲು, ಕುಟುಂಬದಲ್ಲಿ ಹಠಾತ್ ಸಾವಿನ ಇತಿಹಾಸ ಹಾಗೂ ಜೀವನಶೈಲಿ ಭಾರತದಲ್ಲಿ ಯುವಕರ ಹಠಾತ್ ಸಾವಿಗೆ ಕಾರಣವಾಗಿದೆ. ಇನ್ನೂ ಸಾಕಷ್ಟು ಅಧ್ಯಯನ ಈ ಬಗ್ಗೆ ನಡೆಸಬೇಕಾಗಿದೆ ಎಂದು ಹೇಳಿದೆ. ಭಾರತದಲ್ಲಿ 18-45 ವರ್ಷ ವಯಸ್ಸಿನ ವಯಸ್ಕರಲ್ಲಿ ನಿಗೂಢ ಸಾವುಗಳಿಗೆ ಸಂಬಂಧಿಸಿದ ಅಂಶಗಳು ಎಂಬ ಶೀರ್ಷಿಕೆಯಡಿಯಲ್ಲಿ ಈ ಸಾವುಗಳು ಕೋವಿಡ್ ಲಸಿಕೆಯಿಂದ ಅಲ್ಲ ಇನ್ನಿತರ ಕಾರಣಗಳಿಂದ ಸಂಭವಿಸಿದೆ ಎಂದು ಅಧ್ಯಯನ ತಿಳಿಸಿದೆ.

ಭಾರತದಲ್ಲಿ ಆರೋಗ್ಯವಂತ ವಯಸ್ಕರಲ್ಲಿ ಹಠಾತ್ ಸಾವಿನ ವರದಿಗಳು ಹೊರಹೊಮ್ಮಲು ಪ್ರಾರಂಭಿಸಿದ ನಂತರ ಸಂಶೋಧಕರು ತನಿಖೆ ನಡೆಸಿದ್ದಾರೆ. ಏಕೆಂದರೆ ಈ ಸಾವುಗಳ ಹಿಂದೆ ಕೋವಿಡ್-19 ಅಥವಾ ಅದರ ವಿರುದ್ಧ ತೆಗೆದುಕೊಳ್ಳಲಾದ ಲಸಿಕೆಯೇ ಕಾರಣ ಎಂಬ ಕಳವಳ ಉಂಟಾಗಿತ್ತು. ಹಾಗಾಗಿ ಸಂಶೋದನಾ ಸಂಸ್ಥೆ, 18-45 ವರ್ಷ ವಯಸ್ಸಿನ ಭಾರತೀಯ ವಯಸ್ಕರಲ್ಲಿ ಹಠಾತ್ ಸಾವುಗಳಿಗೆ ಕಾರಣವೇನು ಎಂಬುದನ್ನು ಅಧ್ಯಯನ ಮಾಡಿದೆ. ಸಂಶೋಧಕರು ಈ ಬಗ್ಗೆ 729 ಪ್ರಕರಣಗಳ ಮಾಹಿತಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿದೆ. ಅಧ್ಯಯನ ಮಾಡಲಾದ ಪ್ರಕರಣಗಳು 18-45 ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳು ಯಾವುದೇ ಅಸ್ವಸ್ಥತೆಗಳಿಲ್ಲದೆ ಅಕ್ಟೋಬರ್ 1, 2021- ಮಾರ್ಚ್ 31, 2023 ರ ನಡುವೆ ನಿಗೂಢ ಕಾರಣಗಳಿಂದ ಮರಣ ಹೊಂದಿದ್ದಾರೆ. ಇದಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ತಿಳಿಸಿದೆ.

ತಜ್ಞರು ಕೋವಿಡ್ – 19 ಲಸಿಕೆ/ಸೋಂಕು ಮತ್ತು ಕೋವಿಡ್ ನಂತರದ ಆರೋಗ್ಯ ಪರಿಸ್ಥಿತಿಗಳು, ಕುಟುಂಬದಲ್ಲಿ ಯಾರಾದರೂ ಹಠಾತ್ ಸಾವನ್ನಪ್ಪಿದ್ದಾರಾ?, ಧೂಮಪಾನ ವ್ಯಸನ, ಮಾದಕವಸ್ತು ಬಳಕೆ, ಮದ್ಯದ ವ್ಯಸನಿ ಹಾಗೂ ಸಾವಿಗೆ ಎರಡು ದಿನಗಳ ಮುಂಚಿತವಾಗಿ ತೀವ್ರವಾದ ದೇಹ ದಂಡನೆ ಮಾಡಿ ಕೆಲಸ ಮಾಡಿರುವರೇ ಎಂಬುದರ ಬಗ್ಗೆ ದತ್ತಾಂಶಗಳನ್ನು ಸಂಗ್ರಹ ಮಾಡಿದ್ದಾರೆ. ವಯಸ್ಕರಲ್ಲಿ ಈ ಹಠಾತ್​ ಸಾವಿಗೆ ಕಾರಣಗಳನ್ನು ಸ್ಪಷ್ಟಪಡಿಸಿರುವ ಸಂಶೋಧಕರು, ಕುಟುಂಬದಲ್ಲಿ ಹಠಾತ್ ಸಾವಿನ ಇತಿಹಾಸ, ಸಾವಿನ ಮೊದಲು ಅತಿಯಾದ ಮದ್ಯಪಾನ, ಡ್ರಗ್ಸ್​ ಬಳಸುವುದು ಮತ್ತು ತೀವ್ರ ದೈಹಿಕ ಚಟುವಟಿಕೆಯನ್ನು ಮಾಡಿರುವುದರಿಂದ ಹಠಾತ್ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ. ಅದರಲ್ಲೂ ಲಸಿಕೆಯ ಎರಡು ಡೋಸ್‌ಗಳು ನಿಗೂಢ ಹಠಾತ್ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ. ಆದರೆ ಒಂದೇ ಡೋಸ್ ಪಡೆದಿರುವವರಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಎಂದು ಐಸಿಎಮ್‌ಆರ್ ಅಧ್ಯಯನ ತಿಳಿಸಿದೆ.
ಐಸಿಎಮ್‌ಆರ್ ವಿವರವಾದ ಅಧ್ಯಯನ ನಡೆಸಿದ್ದು, ಈ

ಅಧ್ಯಯನದ ಪ್ರಕಾರ, ತೀವ್ರವಾದ COVID-19 ಸೋಂಕಿನಿಂದ ಬಳಲಿದ್ದವರು ಹೃದಯಾಘಾತಗಳಂತಹ ಕಾಯಿಲೆಗಳಿಂದ ತಪ್ಪಿಸಿಕೊಳ್ಳಲು ಒಂದೆರಡು ವರ್ಷಗಳವರೆಗೆ ತಮ್ಮನ್ನು ತಾವು ಅತಿಯಾಗಿ ದಂಡಿಸಬಾರದು ಎಂದು ತಿಳಿಸಿದ್ದಾರೆ. ಅಂದರೆ ಕಠಿಣ ವ್ಯಾಯಾಮಗಳನ್ನು ಮಾಡುವುದು, ಓಟ, ಅತಿಯಾಗಿ ದುಡಿಯುವುದು ಮೊದಲಾದವುಗಳಿಂದ ಕೊಂಚ ವಿಶ್ರಾಂತಿ ಪಡೆಯಬೇಕು ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *