ಸಮಗ್ರ ನ್ಯೂಸ್: ಪ್ರತಿಭಾವಂತ ಬಾಲಕಿ ನಿಶಿತಾ ಆಟವಾಡುವಾಗ ಬಿದ್ದು ಬೆನ್ನ ಹುರಿ ಮುರಿದು ಹಾಸಿಗೆ ಹಿಡಿದಿರುವ ಕರಣಾಜನಕ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಹಾರ್ಗೋಡು ಗ್ರಾಮದಲ್ಲಿ ನಡೆದಿದ್ದು, ಮಗುವಿನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಗಳು ಅಗತ್ಯವಿದ್ದು. ಇದೀಗ ಸಹೃದಯಿಗಳಲ್ಲಿ ನೆರವಿನ ಹಸ್ತ ಚಾಚಿದ್ದಾರೆ.
ಹಾರ್ಗೋಡಿನಲ್ಲಿ ಕೂಲಿ ಕಾರ್ಮಿಕರಾಗಿರುವ ಕೆ.ಆರ್. ಶ್ರೀಧರ್ ಹಾಗೂ ಗೀತಾ ದಂಪತಿಯ ಪುತ್ರಿ, ಬಾನಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ನಿಶಿತಾ ಪ್ರತಿಭಾವಂತೆಯಾಗಿದ್ದು, ಶಾಲೆಯಲ್ಲಿ ಓದುವುದರಲ್ಲೂ ಮುಂದಿದ್ದಳು. ಒಂದು ದಿನ ಮನೆಯ ಪಕ್ಕದ ಮಕ್ಕಳ ಜೊತೆ ಆಟವಾಡುತ್ತಿದ್ದಾಗ ತಲೆಕೆಳಗಾಗಿ ಬಿದ್ದು ತನ್ನ ದೇಹದ ಕೈಕಾಲಿನ ಸ್ವಾಧೀನ ಕಳೆದುಕೊಂಡಿದ್ದಾಳೆ. ದಿನದ ಒಪ್ಪತ್ತಿಗೂ ಕೂಲಿ ಕೆಲಸವನ್ನೇ ಅವಲಂಬಿಸಿದ್ದು ಒಬ್ಬಳೇ ಮಗಳ ಅನಾರೋಗ್ಯದಿಂದ ಕಂಗೆಟ್ಟು ಹೋಗಿದ್ದಾರೆ.
ಔಷಧಿಗೆ ಶೇ 50 ರಷ್ಟು ಸ್ಪಂಧಿಸಿರುವ ಬಾಲಕಿ ಈಗ ಒಂದು ಕೈ ಹಾಗೂ ಕಾಲುಗಳಿಗೆ ಸ್ಪರ್ಷ ಬಂದಿದೆ. ಬಣಕಲ್‍ನ ಶ್ರೀಕೃಷ್ಣ ಕ್ಲಿನಿಕ್ ವೈದ್ಯರು ಅವಳಿಗೆ ಪಿಸಿಯೋತೆರಫಿ ನೀಡುತ್ತಿದ್ದು. ಬಾಲಕಿಯು ಗುಣವಾಗುತ್ತೇನೆಂಬ ಆತ್ಮವಿಶ್ವಾಸದಿಂದ ಮುಂದಿನ ಕನಸು ಕಾಣುತ್ತಿದ್ದಾಳೆ. ನಿಲ್ಲಲು ಆಗದ ಕೈಯನ್ನು ಎತ್ತಲು ಆಗದ ಸ್ಥಿತಿಯಿಂದ ಇರುವ ಬಾಲಕಿ ನಿಶಿತಾಗೆ ಪೋಷಕರು ಚಿಕಿತ್ಸೆಗೆ ನೆರವು ಕೋರಿ, ತಮ್ಮ ಅಳಲು ತೋಡಿಕೊಂಡಿದ್ದಾರೆ. ಮಗುವಿನ ಚಿಕಿತ್ಸೆಗೆ ಸುಮಾರು 5ಲಕ್ಷ ಖರ್ಚು ಇದ್ದು, ಸಹೃದಯಿಗಳಲ್ಲಿ ನೆರವಿನ ಹಸ್ತ ಚಾಚಿದ್ದಾರೆ.
ಹೆಚ್ಚಿನ ಮಾಹಿತಿಗೆ ಪೋಷಕರ ದೂರವಾಣಿ ಸಂಖ್ಯೆ 9980430710 ಕರೆ ಮಾಡಬಹುದು ಅಥವಾ ದಾನಿಗಳು ಖಾತೆ ಸಂಖ್ಯೆ 0692500136635601. ಐಎಫ್ ಎಸ್ ಸಿ ಕೋಡ್: ಕೆಎಆರ್ ಬಿ0000069. ಅವರ ಖಾತೆಗೆ ಹಣ ಹಾಕಬಹುದು ಅಥವಾ ಪೋನ್ ಪೇ ಮಾಡುವ ಮೂಲಕ ನೆರವು ನೀಡಬಹುದು.