Ad Widget .

ಅಯೋಧ್ಯೆಯ ರಾಮನ ಅಕ್ಷತೆ/ ನವೆಂಬರ್ 25ಕ್ಕೆ ಸಿದ್ಧಗಂಗಾ ಕ್ಷೇತ್ರಕ್ಕೆ

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮ ದೇವರಿಗೆ ಅರ್ಪಿಸಲಾದ ಪವಿತ್ರವಾದ ಅಕ್ಷತೆ ತುಮಕೂರು ಸಿದ್ಧಗಂಗಾ ಕ್ಷೇತ್ರಕ್ಕೆ ನವೆಂಬರ್ 25ರಂದು ಆಗಮಿಸಲಿದೆ ಎಂದು ವಿಶ್ವ ಹಿಂದೂಸ್ತಾನ್ ಜಿಲ್ಲಾಧ್ಯಕ್ಷ ರಾದ ಜಿ.ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

Ad Widget . Ad Widget .

ಶ್ರೀರಾಮನಿಗೆ ಪವಿತ್ರವಾದ ಅಕ್ಷತೆಯನ್ನು ನವೆಂಬರ್5 ರಂದು ಅರ್ಪಿಸಲಾಗಿದ್ದು, ಈ ಅಕ್ಷತೆಯು ನವೆಂಬರ್ 25ರ ಸಂಜೆ 4ಗಂಟೆಗೆ ತುಮಕೂರಿನ ಸಿದ್ಧಗಂಗ ಕ್ಷೇತ್ರಕ್ಕೆ ಬರಲಿದೆ. ತುಮಕೂರು ಜಿಲ್ಲೆಯ ಪರವಾಗಿ ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಸ್ವೀಕರಿಸಿ, ನಂತರ ಅಕ್ಷತೆಯ ಭಂಡಾರವನ್ನು ರಜತರಥದಲ್ಲಿಟ್ಟು ಪೂಜಿಸುವರು. ಅಲ್ಲಿಂದ ರೇವು ಬಿ.ಹೆಚ್.ರಸ್ತೆಯ ಮೂಲಕ ಶಂಕರಮಠ ತಲುಪುಲಿದೆ. ನಂತರ ಬೃಹತ್ ಶೋಭಾಯಾತ್ರೆಯಲ್ಲಿ ಭಜನಾ ತಂಡಗಳು, 108 ಮಹಿಳೆಯರ ಪೂರ್ಣ ಕುಂಭಗಳು ಮತ್ತು ಶ್ರದ್ಧಾ ಹಿಂದೂ ಬಾಂಧವರು ಮಹಾನಗರ ಪಾಲಿಕೆಯ ವೃತ್ತದಲ್ಲಿನ ನಾಗರಕಟ್ಟೆಗೆ ಕರೆತರಲಿದ್ದಾರೆ.

Ad Widget . Ad Widget .

ನಂತರದ ದಿನಗಳಲ್ಲಿ ಪವಿತ್ರವಾದ ಅಕ್ಷತೆಯನ್ನು ಜಿಲ್ಲೆಯ ಎಲ್ಲಾ ಮನೆಗಳಿಗೂ ವಿಶ್ವ ಹಿಂದೂ ಪರಿಷತ್ತಿನ ಮೂಲಕ ತಲುಪಿಸಲಾಗುವುದು ಎಂದು ತಿಳಿಸಿದರು. ಈ ಶೋಭಾಯಾತ್ರೆಯಲ್ಲಿ ಭಾಗವಹಿಸುವಂತೆ ನಗರದ ಹಿಂದೂ ಬಾಂಧವರಲ್ಲಿ ವಿನಂತಿ ಮಾಡಲಾಗಿದೆ.

Leave a Comment

Your email address will not be published. Required fields are marked *