Ad Widget .

ದೀಪಾವಳಿ ಕಥಾಸ್ಪರ್ಧೆ| ಮೆಚ್ಚುಗೆ ಪಡೆದ ಕಥೆ| ‘ಆತ್ಮ ಬಂಧುಗಳು’

ಸಮಗ್ರ ನ್ಯೂಸ್: ಸಮಗ್ರ ಸಮಾಚಾರವು ದೀಪಾವಳಿ ವಿಶೇಷಾಂಕಕ್ಕೆ ಕಥಾ ಸ್ಪರ್ಧೆ ಆಯೋಜಿಸಿದ್ದು, ಈ ಸ್ಪರ್ಧೆಗೆ ಹಲವು ಕಥೆಗಳು ಬಂದಿವೆ. ಇವುಗಳಲ್ಲಿ ಮೂರು ಕಥೆಗಳು ಸಂಚಿಕೆಯಲ್ಲಿ ಪ್ರಕಟವಾಗಿದ್ದು, ಮೆಚ್ಚುಗೆ ಪಡೆದ ಉಳಿದ ಕಥೆಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಈ ಸರಣಿಯಲ್ಲಿ ಕಥೆಗಾರ್ತಿ ರಮಿತಾ ಶೆಟ್ಟಿ ಬರೆದ ‘ಆತ್ಮಬಂಧುಗಳು’ ಶೀರ್ಷಿಕೆಯ ಕಥೆ ನಿಮಗಾಗಿ…

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಆಕಾಶವೇ ತಲೆ ಮೇಲೆ ಬಿದ್ದವರ ಹಾಗೆ ಬಸ್ಸಿನಲ್ಲಿ ಶೂನ್ಯ ದೃಷ್ಟಿಯಿಂದ ಏನು ಯೋಚನೆ ಮಾಡ್ತಾ ಕುಳಿತಿದ್ದ ಷಣ್ಮುಖ್. ಅಷ್ಟರಲ್ಲಿ ಬಸ್ ನಿರ್ವಾಹಕ ಷಣ್ಮುಖ ನ ಹತ್ತಿರ ಬಗ್ಗೆ ಬಂದು “ಸರ್ ಸರ್ ಎಲ್ಲಿ ಹೋಗ್ತಿದ್ದೀರಾ? ಟಿಕೆಟ್ ಆಯ್ತಾ” ಎಂದು ಕೇಳಿದ. ಒಳ ಮನಸ್ಸಿನಲ್ಲಿ ಷಣ್ಮುಖ್ “ನನ್ನ ಜೀವನದಲ್ಲಿ ಎಲ್ಲಾ ಮುಗಿಯುವ ಹಂತದಲ್ಲಿರುವಾಗ ಎಲ್ಲಿಗೆ ಹೋಗಲಿ” ಅಂದುಕೊಳ್ಳುತ್ತಾನೆ.

Ad Widget . Ad Widget . Ad Widget .

ಮತ್ತೆ ನಿರ್ವಾಹಕ ಕೇಳಿದ “ಸರ್ ಟಿಕೆಟ್ ಆಯ್ತಾ” ಅಂತ ಕೇಳಿದ
ಅದಕ್ಕೆ ಷಣ್ಮುಖ್ ಗಾಡ ಆಲೋಚನೆ ಬಿಟ್ಟು” ಟಿಕೆಟ್ ಆವಾಗ್ಲೇ ಆಗಿದೆ ಎಂದ. ಆ ಕ್ಷಣಕ್ಕೆ ಬಸ್ ನಿಂತಿತು.

ಚಿಕ್ಕ ಹುಡುಗಿಯೊಬ್ಬಳು ಬಸ್ ಹತ್ತಿದಳು. ಷಣ್ಮುಖ್ ನನ್ನು ಗುರುತಿಸಿ ನೀವು ಕುಂದಾಪುರದ ಹಾಸ್ಯ ನಾಟಕಗಳಲ್ಲಿ ಹಾಸ್ಯ ಮಾಡುತ್ತಿರಲ್ಲವೇ? ಅಂಕಲ್” ಎಂದು ಕೇಳುತ್ತಾಳೆ. ಇನ್ನೂ ವಾಸ್ತವಕ್ಕೆ ಬಾರದೆ ಷಣ್ಮುಖ್ ಯೋಚನೆಯಲ್ಲಿ ಮುಳುಗಿದ್ದ.

“ಅಂಕಲ್ ಅಂಕಲ್ “ಎಂದು ಮೈ ಮುಟ್ಟಿ ಕರೆದಾಗ ವಾಸ್ತವಕ್ಕೆ ಬಂದ ಷಣ್ಮುಖ್” ಅರೆ “ಮಗು ನಿನ್ನನ್ನು ಎಲ್ಲೋ ನೋಡಿದ ಹಾಗೆ ಇದೆ. ನಿನ್ನ ಹೆಸರೇನು? ಯಾವೂರು?

ಅದಕ್ಕೆ ಆ 8 ವರ್ಷದ ಮಗು” ಅಂಕಲ್ ನನ್ನ ಹೆಸರು ಸ್ಪೂರ್ತಿ ಅಂತ. ನಿಮ್ಮ ಫೋಟೋ ನೋಡಿದ್ದೇನೆ . ನೀವು ನಮ್ಮೂರಿಗೆ ಬಂದಾಗ ನಿಮ್ಮ ಹಾಸ್ಯವನ್ನು ನಾನು ನೋಡಿದ್ದೇನೆ. ನೀವು ಚೆನ್ನಾಗಿ ಹಾಸ್ಯ ಮಾಡುತ್ತಿರಿ. ನಮ್ಮೂರು ಕುಂದಾಪುರ ತಾಲೂಕಿನ ಹಾಲಾಡಿ ಎನ್ನುವ ಊರು.

ಷಣ್ಮುಖನಿಗೆ ಸ್ಪೂರ್ತಿಯನ್ನು ನೋಡಿದ ಮೇಲೆ ಆಕೆಯ ಮುಖ ಪರಿಚಯಸ್ಥ ಮುಖದಂತೆ ಕಾಣಿಸಿತು. ತನ್ನ ಸೀಟಿನಲ್ಲಿ ಆ ಸ್ಪೂರ್ತಿಯನ್ನು ಕುಳ್ಳಿರಿಸಿಕೊಂಡು “ನೀನು ಬಸ್ ನಲ್ಲಿ ಒಬ್ಬಳೇ ಬಂದ್ಯಾ? ಯಾರಿದ್ದಾರೆ ನಿನ್ನ ಜೊತೆ” ಎಂದನು.

ಹಿಂಗಡೆ ಕೈ ತೋರಿಸುತ್ತಾ “ನನ್ನಮ್ಮ ಬಂದಿದ್ದಾಳೆ. ಅಲ್ಲಿ ನಿಂತಿದ್ದಾಳೆ ನೋಡಿ ಎಂದು ಹೇಳಿದ್ದನ್ನು ಕೇಳಿ ಷಣ್ಮುಖ್” ಮಗು ನಿನ್ನಮ್ಮನನ್ನು ಕರೆ ನೀನು ಸ್ವಲ್ಪ ಈ ಕಡೆ ಜರಗು ಈ ಸೀಟಲ್ಲಿ ಮೂವರು ಕುಳಿತುಕೊಳ್ಳು ಬಹುದು” ಎಂದ.

ಸ್ಪೂರ್ತಿ ಹಿಂದೆ ನೋಡಿ ತಾಯಿಯನ್ನು ಸನ್ನೆ ಮಾಡಿ ಕರೆದಳು. ಷಣ್ಮುಖ್ ಸ್ಪೂರ್ತಿ ತಾಯಿಯನ್ನು ನೋಡುತ್ತಲೇ “ಓ ಜಯಪದ್ಮ! ಅಲ್ಲ ಅಲ್ಲ ಶ್ರೀದೇವಿ ನೀನಾ ಈಕೆ ತಾಯಿ? ಅದೇ ನೋಡಿದೆ ನಿನ್ನ ಮಗಳು ಸ್ಪೂರ್ತಿ ನೀನು ಚಿಕ್ಕಂದಿನಲ್ಲಿ ಇದ್ದಹಾಗೆ ಕಾಣುತ್ತಾಳೆ.” ಎಂದು ಮಾತು ನಿಲ್ಲಿಸುತ್ತಲೇ ಸ್ಪೂರ್ತಿ ಅಮ್ಮನಲ್ಲಿ ಮೆಲ್ಲಗೆ ನಿನಗೆ “ಅಂಕಲ್ ಪರಿಚಯಸ್ಥರೇ?” ಅವರೇಕೆ ನಿನ್ನನ್ನು ಜಯಪದ್ಮ ಎಂದು ಕರೆದ್ರು? ಎಂದು ಗುನುಗುತ್ತಿದ್ದಾಗ, ಷಣ್ಮುಖ ಈ ಮಾತನ್ನು ಕೇಳಿಸಿಕೊಂಡು” ನಿನ್ನ ತಾಯಿ ಮತ್ತು ನಾನು ಒಂದೇ ಶಾಲೆಯಲ್ಲಿ ಓದಿದವರು ನಾನು 2ನೇ ತರಗತಿಯಲ್ಲಿದ್ದಾಗ ಆಕೆ 1 ನೇ ತರಗತಿಯಲ್ಲಿ ಇದ್ದಳು. ಒಂದು ದಿನ ಪುಟ್ಟ ಹುಡುಗಿಯಾದ ಅವಳು ನಾವು ಓದುತ್ತಿದ್ದ ಶಾಲೆ ಹಿಂಭಾಗದಲ್ಲಿ ರಾಜ್ಯ ಹೆದ್ದಾರಿ ಇತ್ತು. ಆಗ ಬರುತ್ತಿದ್ದ ಬೆರಳೆಣಿಕೆಯ ಬಸ್ಸುಗಳ ಪೈಕಿ ಜಯಪದ್ಮ ಬಸ್ಸು ಒಂದು. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಆಕೆ ರಸ್ತೆ ದಾಟಿ ಮನೆಯವರ ಜೊತೆ ಮನೆಗೆ ಹೋಗಿ ಊಟ ಮಾಡಿಕೊಂಡು ಬರುತ್ತಿದ್ದಳು. ಹೀಗಿರಲು ಒಂದು ದಿನ ಮನೆಯವರು ಯಾರು ಬಂದಿರ ಬಂದಿರಲಿಲ್ಲ. ಇವಳು ಒಬ್ಬಳೇ ರಸ್ತೆ ದಾಟುತ್ತೇನೆಂದು ಜಯಪದ್ಮ ರಸ್ತೆಯಲ್ಲಿ ಬಿದ್ದುಬಿಟ್ಟಳು! ಬಸ್ಸು ವೇಗವಾಗಿ ಬಂದು ಪಕ್ಕನೆ ನಿಲ್ಲಿಸಿದ. ಬಸ್ ಚಾಲಕ ಇಳಿದು ನೋಡಿದರೆ ಶ್ರೀದೇವಿ ಎಲ್ಲೂ ಕಾಣುತ್ತಿಲ್ಲ! ಸುತ್ತ ಮುತ್ತ ನೋಡಿದ ಎಲ್ಲೂ ಕಾಣುತ್ತಿಲ್ಲ ಬಗ್ಗಿ ನೋಡಿದ ಬಸ್ಸಿನ ಎರಡು ಚಕ್ರಗಳ ಮಧ್ಯದ ಖಾಲಿ ಜಾಗದಲ್ಲಿ ಬಿದ್ದು ಅಲ್ಲೇ ಅಳುತ್ತಿದ್ದಾಳೆ. ಅದೃಷ್ಟವೆಂಬಂತೆ ಕೂದಲೆಳೆಯ ಅಂತರದಲ್ಲಿ ನಿನ್ನಮ್ಮ ಪಾರಾಗಿದ್ದಾಳೆ ಅಂದಿನಿಂದೀಚೆಗೆ ಶಾಲೆಯಲ್ಲಿ ಅವಳಿಗೆ ಜಯಪದ್ಮ ಎಂದು ಕರೆಯುತ್ತಾರೆ.”

ಶ್ರೀದೇವಿಯು ತಾನು ಮದುವೆಯಾಗಿ ಹಾಲಾಡಿಯಲ್ಲಿ ಇರುವುದಾಗಿ ಹೇಳಿದಳು. ಷಣ್ಮುಖ ತನ್ನ ಬಗ್ಗೆ ಹೇಳುತ್ತಾ ಬಸ್ಸಿನಲ್ಲಿ ಪ್ರಯಾಣಿಸುತ್ತ ತನ್ನ ಕಿಡ್ನಿ ವೈಫಲ್ಯದ ವಿಚಾರ, ವಿದ್ಯಾಭ್ಯಾಸ ಅರ್ಧಕ್ಕೆಬಿಟ್ಟುತಾನು ಹೋಟೆಲ್ ಉದ್ಯಮಕ್ಕೆ ಹೋಗಿ ದುಡಿದ ಹಣವನ್ನು ವಿದ್ಯಾಭ್ಯಾಸಕ್ಕೆ ಅಕ್ಕನ ಮದುವೆಗೆ ಖರ್ಚು ಮಾಡಿದೆ. ಅಮ್ಮನಿಗೆ ಈಗ ಕ್ಯಾನ್ಸರ್ ಕಾಯಿಲೆ, ಅವಳ ಚಿಕಿತ್ಸೆಯು ನಡೆಯುತ್ತಿದೆ. ಜೊತೆಗಿ ನನಗೆ ಕಿಡ್ನಿ ವೈಫಲ್ಯವಾಗಿದೆ. ವೈದ್ಯರು ಶಾಸ್ತ್ರ ಚಿಕಿತ್ಸೆ ಮಾಡಿಸಬೇಕೆಂದು ಹೇಳಿದ್ದಾರೆ. ಕಿಡ್ನಿ ಕೊಡಲು ಅಮ್ಮ ರೆಡಿ ಇದ್ದಾಳೆ ಆದರೆ ಕ್ಯಾನ್ಸರ್ ಇರುವವರು ಕಿಡ್ನಿ ಕೊಡುವ ಹಾಗಿಲ್ಲ, ತಂಗಿಗೆ ಇನ್ನು ಮದುವೆಯಾಗಬೇಕು . ಬಹಳ ಚಿಕ್ಕ ವಯಸ್ಸಿನಲ್ಲಿ ದುಡಿಯಲು ಶುರು ಮಾಡಿದ ನನಗೆ ಅಕ್ಕ ನನಗೆ ಅವಳ ಮಗಳನ್ನು ಮದುವೆ ಮಾಡಿಸುವೆ ಎಂದೆಲ್ಲ ಹೇಳಿದ್ದಳು. ಈಗ ಆರೋಗ್ಯ ಕೈ ಕೊಟ್ಟಾಗ ತಂಗಿ ಅಕ್ಕ ಯಾರು ಸಹಾಯಕ್ಕೆ ಬರ್ತಾ ಇಲ್ಲ. ಪಾಪ ಅಮ್ಮನಿಗೆ ಸಹಾಯಕ ಪರಿಸ್ಥಿತಿ.
ಹೇಳಿದ ಶ್ರೀದೇವಿ ಮತ್ತು ಸ್ಪೂರ್ತಿಯ ಕಣ್ಣಲ್ಲಿ ತಂತಾನೆ ಕಣ್ಣೀರು ಬಂತು.

ಇಷ್ಟರಲ್ಲಿ ಶ್ರೀದೇವಿಯ ಜಂಗಮವಾಣಿಗೆ ಅವಳ ಗಂಡನ ಫೋನ್ ನಂಬರ್ ನಿಂದ ನಿಮಗೆ ಇವರು ಏನಾಗಬೇಕು ಎನ್ನುತ್ತಾ ಆ ಕಡೆಯಿಂದ ಒಂದು ಅಪರಿಚಿತ ಧ್ವನಿ ಕೇಳಿಸಿತು ಅದಕ್ಕೆ ಶ್ರೀದೇವಿ ಅವರು ನನ್ನ ಗಂಡ. ಅವರಿಗೆ ಅಪಘಾತವಾಗಿದೆ ಅವರನ್ನು ಇಲ್ಲೇ ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದೇವೆ ನೀವು ಬನ್ನಿ ಎಂದು ಫೋನ್ ಇಟ್ಟರು.

ಶ್ರೀದೇವಿಗೆ ಆಮೇಲೆ ದಿಕ್ಕೇದೋಚದಾದಾಗ ತನ್ನಲ್ಲಿ ಇದ್ದ ಹಣವನ್ನು ಶ್ರೀದೇವಿಗೆ ಕೊಟ್ಟು, ಬಸ್ಸಿನಿಂದ ಇಳಿದು,ಬಾಡಿಗೆ ಕಾರು ಮಾಡಿಕೊಂಡು ಶ್ರೀದೇವಿ ಷಣ್ಮುಖ ಸ್ಪೂರ್ತಿ ಮೂವರು ಆಸ್ಪತ್ರೆಗೆ ಹೋದರು. ತನ್ನ ಚಿಕಿತ್ಸೆಗೆ ಎಂದು ಇಟ್ಟಿದ ಹಣವನ್ನು ಶ್ರೀದೇವಿಯ ಗಂಡ ಸತೀಶನ ಚಿಕಿತ್ಸೆಗೆ ಖರ್ಚು ಮಾಡಿದ.

ಸತೀಶ್ ಮಗಳು ಸ್ಪೂರ್ತಿಯನ್ನು ಕರೆದು ಸ್ಪೂರ್ತಿಯ ಬಾಯಿಂದ ಷಣ್ಮುಖನ ವಿಚಾರ ಎಲ್ಲವನ್ನು ತಿಳಿದುಕೊಂಡ. ಆಗ ಸ್ಫೂರ್ತಿಯು” ದೇವರು ಷಣ್ಮುಖ ಅಂಕಲ್ ಹಾಗೂ ನಿಮ್ಮಂತವರಿಗೆ ಕಷ್ಟ ಕೊಡುತ್ತಾನೆ ಏಕೆ ಅಪ್ಪ?”. ಎಂದು” ಹೌದು ಕೆಲವನ್ನು ನಾವೇ ಸರಿ ಮಾಡಬೇಕು” ಎಂದ ಸತೀಶ್.

ಸತೀಶ್ ಸ್ವತಃ ವೈದ್ಯನಾಗಿ ನಾನು ಬದುಕುವುದಿಲ್ಲ ಎಂದು ತಿಳಿದು ಸ್ಪೂರ್ತಿಯಾ ಹತ್ತಿರ ಒಂದು ಕಾಗದ ಪೆನ್ನು ತರಲು ಹೇಳಿದ ಒಂದಷ್ಟು ವಿಚಾರ ಬರೆದಿದ್ದ ಇದು ಆಸ್ಪತ್ರೆಯಿಂದ ಮನೆಗೆ ಹೋದ ಮೇಲೆ ಓದಿ ಇದರಂತೆ ನಡೆಯಿರಿ ನೀನು ನಿನ್ನ ತಾಯಿ ಎಂದ. ಅಂತೆಯೇ ಎರಡು ದಿನ ಕಳೆದ ಮೇಲೆ ಸತೀಶ್ ಕೊನೆಯುಸಿರು ಬಿಟ್ಟ.

ನನ್ನ ಕಷ್ಟವನ್ನು ಲೆಕ್ಕಿಸದೆ ಷಣ್ಮುಖ ಅವರು ಸಕಾಲದಲ್ಲಿ ನನ್ನ ನನಗೆ ಚಿಕಿತ್ಸೆಗೆ ಹಣ ಮತ್ತು ರಕ್ತ ಕೊಟ್ಟು ಶ್ರೀದೇವಿಯ ಜೊತೆ ಬಂದು ನೆರವಾದರು. ಸಹಾಯಕ್ಕೆ ಋಣಿಯಾಗಿದ್ದೇನೆ. ನನ್ನ ಒಂದು ಕಿಡ್ನಿಯನ್ನು ಅವರಿಗೆ ದಾನ ಮಾಡಿದ್ದೇನೆ. ಆತ್ಮ ಬಂಧುಗಳಾದ ಅವರು ಅವರ ಒಪ್ಪಿಗೆ ಇದ್ದರೆ ನನ್ನ ಹೆಂಡತಿಗೆ ಗಂಡನಾಗಿ ಮತ್ತು ನನ್ನ ಮಗಳು ಸ್ಪೂರ್ತಿಗೆ ಅವರು ತಂದೆಯಾಗಿ ಜೀವನದ ಹಾದಿಯಲ್ಲಿ ಪಯಣಿಸಬೇಕು ಅನ್ನೋದು ನನ್ನ ಕೊನೆಯ ಆಸೆ ಎಂದು ಬರೆದಿತ್ತು.

ಇದನ್ನು ಓದಿದ ಸ್ಪೂರ್ತಿ ಷಣ್ಮುಖ ಮತ್ತು ಅವರ ತಾಯಿಗೆ ಹೇಳಿದಾಗ ಸ್ವಲ್ಪ ದಿನ ಯೋಚಿಸಿದರೂ, ಶ್ರೀದೇವಿಯು ಕೂಡ ಸ್ವಲ್ಪ ದಿನ ಯೋಚಿಸಿದರೂ ಸ್ಪೂರ್ತಿಯ ಭವಿಷ್ಯಕ್ಕೋಸ್ಕರ ಸಂಗಾತಿಗಳಾದರು.

ಎಂ. ರಮಿತಾ ಎ. ಶೆಟ್ಟಿ
ಬೈಂದೂರು, ಉಡುಪಿ ಜಿಲ್ಲೆ.

Leave a Comment

Your email address will not be published. Required fields are marked *