Ad Widget .

ಬಿರಿಯಾನಿ ತಿನ್ನೋ ಆಸೆಗೆ 60 ಬಾರಿ ಇರಿದು ಕೊಲೆಗೈದ 16ರ ಬಾಲಕ| ಶವದ ಮುಂದೆ ಕುಣಿದು ವಿಕೃತಿ ಮೆರೆದ ಅಪ್ರಾಪ್ತ

ಸಮಗ್ರ ನ್ಯೂಸ್: ಮೀಸೆ ಮೂಡುವ, ವಯಸ್ಸಿನಲ್ಲಿ ಬಾಲಕನೊಬ್ಬ ವ್ಯಕ್ತಿಯೋರ್ವನ ಕೊಲೆಗೈದು ಅಟ್ಟಹಾಸ ಮೆರೆದ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

Ad Widget . Ad Widget .

ದೆಹಲಿಯಲ್ಲಿ 16 ವರ್ಷದ ಬಾಲಕನೊಬ್ಬ ವ್ಯಕ್ತಿಯೊಬ್ಬನಿಗೆ 60ಕ್ಕೂ ಬಾರಿ ಚಾಕು ಇರಿದು ಆತನ ಶವದ ಎದುರು ಡಾನ್ಸ್‌ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ. ಈ ಭೀಕರ ವಿಡಿಯೊ ವೈರಲ್‌ ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ.

Ad Widget . Ad Widget .

ಕಳೆದ ಮಂಗಳವಾರ (ನವೆಂಬರ್‌ 21) ರಾತ್ರಿ ದೆಹಲಿಯ ವೆಲ್‌ಕಮ್‌ ಎಂಬ ಪ್ರದೇಶದಲ್ಲಿ ಬಾಲಕನು ವ್ಯಕ್ತಿಗೆ ಪದೇಪದೆ ಚಾಕು ಇರಿದ, ಆತನನ್ನು ಕೊಂದ ಬಳಿಕ ಅಲ್ಲಿಯೇ ನೃತ್ಯ ಮಾಡಿದ ಭೀಕರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ‘ಮಂಗಳವಾರ ರಾತ್ರಿ 11.15ರ ಸುಮಾರಿಗೆ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಕರೆ ಬಂದಿದೆ. ವೆಲ್‌ಕಮ್‌ ಪ್ರದೇಶದ ಜನತಾ ಮಜ್ದೂರ್‌ ಕಾಲೋನಿಯಲ್ಲಿ ಬಾಲಕನೊಬ್ಬ ವ್ಯಕ್ತಿಗೆ ಚಾಕು ಇರಿದು ಕೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ’ ಎಂದು ಡಿಸಿಪಿ ಜಾಯ್‌ ಟಿರ್ಕಿ ತಿಳಿಸಿದ್ದಾರೆ.

ಬಾಲಕನಿಗೆ ಬಿರಿಯಾನಿ ತಿನ್ನುವ ಆಸೆಯಾಗಿದ್ದು, ಇದೇ ಆಸೆಯೇ ಆತನನ್ನು ಕೊಲೆ ಮಾಡಿಸಿದೆ ಎಂದು ತಿಳಿದುಬಂದಿದೆ. ಬಾಲಕನಿಗೆ ಬಿರಿಯಾನಿ ತಿನ್ನಬೇಕು ಎಂದು ಅನಿಸಿದೆ. ಆಗ ಆತನು ವ್ಯಕ್ತಿಯಿಂದ ಸುಮಾರು 350 ರೂ. ಕಳ್ಳತನ ಮಾಡಿದ್ದಾನೆ. ಕಳ್ಳತನ ಗೊತ್ತಾದ ವ್ಯಕ್ತಿಯು ಬಾಲಕನ ಜತೆ ಜಗಳಕ್ಕೆ ಇಳಿದಿದ್ದಾನೆ. ಇದೇ ವೇಳೆ ಕುಪಿತಗೊಂಡ ಬಾಲಕನು ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ವ್ಯಕ್ತಿ ಮೂರ್ಛೆ ಹೋದ ಬಳಿಕ ಆತನಿಗೆ ಸುಮಾರು 60 ಬಾರಿ ಚಾಕು ಇರಿದಿದ್ದಾನೆ. ವ್ಯಕ್ತಿ ಮೃತಪಟ್ಟಿದ್ದಾನೆ ಎಂಬುದನ್ನು ದೃಢಪಡಿಸಿಕೊಂಡ ಆತ ಅಲ್ಲಿಯೇ ನೃತ್ಯ ಮಾಡಿದ್ದಾನೆ.

ಪಿಸಿಆರ್‌ಗೆ ಕರೆ ಬಂದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ವ್ಯಕ್ತಿ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *