ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ರೋಡ್ ಸೈಡಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಗೆ 24 ಗಂಟೆಗಳ ಬಳಿಕ ರವಿಕಕ್ಕೆಪದವು ಆಸರೆ ನೀಡಿದ ಘಟನೆ ನ.18ರಂದು ನಡೆದಿದೆ.
ನ.17 ರ ಸಂಜೆ ಇಂಜಾಡಿ ಬಳಿ ಬೆಂಗಳೂರು ನಿವಾಸಿ ಸಂತೋಷ್ ರಸ್ತೆ ಬದಿ ಬಿದ್ದ ಸ್ಥಿತಿಯಲ್ಲಿದ್ದರು. ಸಾರಾಯಿ ಕುಡಿದು ಮಲಗಿದ್ದಾನೆ ಎಂದು ಯಾರು ಗಮನ ಹರಿಸಿರಲಿಲ್ಲ. 24 ಗಂಟೆಗಳು ಕಳೆದರೂ ಅಲ್ಲೇ ಇದ್ದ ವ್ಯಕ್ತಿಯನ್ನು ಕೊನೆಗೆ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನವರು ಉಪಚರಿಸಿದರು. ನ.17 ರ ಸಂಜೆ ಇಂಜಾಡಿ ಬಳಿ ಬಂದ ಸಂತೋಷ್ ಗೆ ಯಾವುದೋ ಕಾರಿನವವರು ಡಿಕ್ಕಿ ಹೊಡೆದು ಎಸ್ಕೆಪ್ ಆಗಿದ್ದರು.
ಸ್ಥಳಕ್ಕೆ ಬಂದ ರವಿ ಕಕ್ಕೆಪದವು ಅವರು ಸಂತೋಷ್ ನ್ನು ಸದಾನಂದ ವೈದ್ಯಕೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸುಳ್ಯ ತಾಲೂಕು ಆಸ್ಪತ್ರೆಗೆ ಕಳಿಸಿಕೊಟ್ಟರು. ಅವರ ದೇಹದ ಕೈಗೆ, ಸೊಂಟಕ್ಕೆ ಬಲವಾದ ಏಟು ಬಿದ್ದಿದ್ದು ನಂತರ ಸಂತೋಷ್ ಮನೆಯವರಿಗೆ ಫೋನ್ ಮುಖಾಂತರ ವಿಷಯ ತಿಳಿಸಿದರು. ಬಳಿಕ ಅಲ್ಲಿಗೆ ಸಂತೋಷ್ ಮನೆಯವರು ಅವರನ್ನು ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.