Ad Widget .

ಮುಂದಿನ ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ ಯಶ್

ಸಮಗ್ರ ಸಮಾಚಾರ: ನಟ ಯಶ್ ಮುಂದಿನ ಸಿನಿಮಾ ಬಗ್ಗೆ ಕರುನಾಡಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಕುತೂಹಲವಿದೆ. ‘ಕೆಜಿಎಫ್ 2’ ಸಿನಿಮಾ ಮೂಲಕ ಮ್ಯಾಜಿಕ್ ಮಾಡಿರುವ ಯಶ್ ಮುಂದೆ ಏನು ಮಾಡಲಿದ್ದರೆ. ‘ಕೆಜಿಎಫ್’ಗಿಂತಲೂ ಬೃಹತ್ ಆದದನ್ನು ನೀಡಬಹುದೇ? ಎಂಬ ಕಾತರ ಸಿನಿಮಾ ಪ್ರೇಮಿಗಳಿಗೆ. ಅದಕ್ಕೆ ತಕ್ಕಂತೆ ಯಶ್ ಸಹ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಯಶ್ ಮೌನವಾಗಿರುವ ಕಾರಣದಿಂದ ಅವರ ಸಿನಿಮಾಗಳ ಬಗ್ಗೆ ಗಾಳಿ ಸುದ್ದಿಗಳು ಸಹ ತುಸು ಗಟ್ಟಿಯಾಗಿಯೇ ಹರಿದಾಡುತ್ತಿವೆ.

Ad Widget . Ad Widget .

ಇದೀಗ ಯಶ್, ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘‘ನನಗೆ ನಿಮ್ಮ ಕಾತರ ಅರ್ಥವಾಗುತ್ತದೆ. ನನ್ನನ್ನು ದೊಡ್ಡದಾಗಿ ಬೆನ್ನುತಟ್ಟಿದ್ದೀರ. ಆದರೆ ನಾನು ಸುಮ್ಮನೆ ಕೂತಿಲ್ಲ, ನಾನು ರಿಲ್ಯಾಕ್ಸ್ ಆಗುತ್ತಿಲ್ಲ, ಬದಲಿಗೆ ದೊಡ್ಡ ಮಟ್ಟದ ಕೆಲಸಕ್ಕೆ ಸಜ್ಜಾಗುತ್ತಿದ್ದೇನೆ. ಸಾಧಾರಣವಾದ ಕೆಲಸ ಮಾಡಲು ನನಗೆ ಇಷ್ಟವಿಲ್ಲ, ಎಲ್ಲರೂ ಹೆಮ್ಮೆ ಪಡುವಂತಹಾ ಕೆಲಸವನ್ನೇ ಮಾಡುತ್ತೇನೆ’’ ಎಂದಿದ್ದಾರೆ.

Ad Widget . Ad Widget .

ನಾನು ಯಾವತ್ತೂ ಸಿನಿಮಾ ಅನೌನ್ಸ್​ಮೆಂಟ್ ಎಂದು ಹೇಳಿಲ್ಲ. ಆದರೆ ಪ್ರತಿ ಹಬ್ಬ ಬಂದಾಗ, ಹುಟ್ಟುಹಬ್ಬ ಬಂದಾಗೆಲ್ಲ ಯಶ್ ಸಿನಿಮಾ ಘೋಷಣೆ ಎಂದು ಸುದ್ದಿ ಹಾಕ್ತಾರೆ ಇದರಿಂದ ಗೊಂದಲ ಸೃಷ್ಟಿಯಾಗಿದೆ. ಖಂಡಿತ ಸಿನಿಮಾ ಅಪ್​ಡೇಟ್ ಕೊಡುತ್ತೀನಿ, ಎಲ್ಲ ಊಟ ರೆಡಿಯಾದ ಮೇಲೆ ಬಡಿಸಿದರೇನೆ ಚೆಂದ. ಅರ್ಧಂಬರ್ಧ ಅಡುಗೆ ಮಾಡಿ ಊಟಕ್ಕೆ ಕರೆಯುವುದು ಸರಿ ಹೋಗುವುದಿಲ್ಲ. ನೀವೆಲ್ಲರೂ ಹೆಮ್ಮೆ ಪಡುವಂತಹಾ ಕೆಲಸ ಮಾಡುತ್ತೀನಿ’’ ಎಂದು ಯಶ್ ಹೇಳಿದ್ದಾರೆ.

Leave a Comment

Your email address will not be published. Required fields are marked *