Ad Widget .

ಭೂ ವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣ| ತನಿಖೆಯಲ್ಲಿ ಬಯಲಾಯ್ತು ಸ್ಪೋಟಕ ಮಾಹಿತಿ

ಸಮಗ್ರ ನ್ಯೂಸ್: ಹಿರಿಯ ಭೂ ವಿಜ್ಞಾನಿ ಪ್ರತಿಮಾ ಕೊಲೆ ಪ್ರಕರಣ ಸಂಬಂಧ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ. ಪ್ರತಿಮಾ ಕೊಲೆ ಕೆಲಸದ ಕಾರಣಕ್ಕೆ ನಡೆದಿಲ್ಲ, ಆರೋಪಿ ಕಿರಣ್​​ ಅರೆಸ್ಟ್ ಆದಾಗ ಸುಳ್ಳು ಹೇಳಿದ್ದಾನೆ. ಕಿರಣ್​​ ಹಣಕ್ಕಾಗಿ ಕೊಲೆ ಮಾಡಿದ್ದು ಬಹಿರಂಗವಾಗಿದ್ದು, ವಿಚಾರಣೆಯ ವೇಳೆ ಅಸಲಿ ಸತ್ಯ ಬಯಲಾಗಿದೆ.

Ad Widget . Ad Widget .

ತಲಘಟ್ಟಪುರ ಇನ್ಸ್​ಪೆಕ್ಟರ್​​​​​​ ಜಗದೀಶ್ ನೇತೃತ್ವದಲ್ಲಿ ತನಿಖೆ ನಡೆದಿದೆ. ಆರೋಪಿ ಕೊಲೆ ಬಳಿಕ ಮನೆಯಲ್ಲಿ ಹಣ, ಒಡವೆ ದೋಚಿದ್ದಾನೆ. ಪ್ರತಿಮಾ ಮನೆಯಲ್ಲಿದ್ದ 5 ಲಕ್ಷ ಹಣವನ್ನೂ ಹಾಗೂ ಪ್ರತಿಮಾ ಕೈನಲ್ಲಿದ್ದ ಎರಡು ಚಿನ್ನದ ಬಳೆ, ಬ್ರೇಸ್​ಲೆಟ್ ದೋಚಿದ್ದಾನೆ. 4 ಲಕ್ಷ ಮೌಲ್ಯದ ಚಿನ್ನಾಭರಣ ಹೊತ್ತೊಯ್ದಿದ್ದಾನೆ. ಹಣವನ್ನು ಕೋಣನಕುಂಟೆಯ ಶಿವು ಮನೆಯಲ್ಲಿ ಇಟ್ಟಿದ್ದ.

Ad Widget . Ad Widget .

ಯಾರೋ ಕೊಡಬೇಕಿದ್ದ ಹಣ, ನಿಮ್ಮ ಮನೆಯಲ್ಲಿ ಇರ್ಲಿ ಎಂದಿದ್ದನಂತೆ, ತಲಘಟ್ಟಪುರ ಪೊಲೀಸರು ಶಿವುನನ್ನು ಸಾಕ್ಷಿಯಾಗಿ ಮಾಡಿದ್ದಾರೆ. ಕಿರಣ್​ ಬಳಿ ಐದು ಲಕ್ಷ ನಗದು ಮತ್ತು ಚಿನ್ನ ವಶಕ್ಕೆ ಪಡೆದಿದ್ದಾರೆ.ಪ್ಲಾನ್ ಮಾಡಿಯೇ ಮನೆಗೆ ನುಗ್ಗಿ ಕೊಲೆ ಮಾಡಿರುವುದು ಬಯಲಾಗಿದೆ.

Leave a Comment

Your email address will not be published. Required fields are marked *