Ad Widget .

ಐಸಿಸಿಯಿಂದ ನೂತನ ನಿಯಮ ಜಾರಿ/ ಮಂಗಳಮುಖಿಯರಿಗೆ ಮಹಿಳಾ ಕ್ರಿಕೆಟ್‍ನಿಂದ ನಿಷೇಧ

ಸಮಗ್ರ ನ್ಯೂಸ್: ಮಹಿಳಾ ಕ್ರಿಕೆಟ್‍ನ ಸುರಕ್ಷತೆ, ನ್ಯಾಯಸಮ್ಮತೆ ಹಾಗೂ ಸಮಗ್ರತೆ ರಕ್ಷಣೆಯ ದೃಷ್ಟಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಮಹಿಳಾ ಕ್ರಿಕೆಟ್‍ನಿಂದ ಮಂಗಳಮುಖಿಯರಿಗೆ ಸಂಪೂರ್ಣ ನಿಷೇಧ ಹೇರಿದೆ. ಏಕದಿನ ವಿಶ್ವಕಪ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಈ ನಿಯಮ ಜಾರಿಗೊಳಿಸಿದೆ.

Ad Widget . Ad Widget .

ಕಳೆದ ಸೆಪ್ಟಂಬರ್‍ನಲ್ಲಿ ಕೆನಡಾದ ಮಂಗಳಮುಖಿ ಕ್ರಿಕೆಟರ್ ಡೇನಿಯಲ್ ಮೆಕ್‍ಗಹೆ ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದರು. ಇದು ವಿವಾದಕ್ಕೆ ಕಾರಣವಾಗಿ, ಕೊನೆಗೆ ಡೇನಿಯಲ್ ಮೆಕ್‍ಗೆಹೆಗೆ ಆಡುವ ಅವಕಾಶ ದೊರೆತಿರಲಿಲ್ಲ. ಈ ಹಿನ್ನಲೆಯಲ್ಲಿ ಐಸಿಸಿ ನೂತನ ನಿಯಮಗಳ ರಚನಾ ಪ್ರಕ್ರಿಯೆಯನ್ನು ಚುರುಕುಗೊಳಿಸಿತ್ತು.

Ad Widget . Ad Widget .

ಹೊಸ ನಿಯಮದ ಪ್ರಕಾರ ಎರಡು ವರ್ಷದಲ್ಲಿ ಮಹಿಳೆಯರ ಲಿಂಗ ಆರ್ಹತೆಯನ್ನು ಪರೀಕ್ಷೆ ಮಾಡಲಾಗುತ್ತದೆ. ಪುರುಷರಾದ ಬಳಿಕ ಮಹಿಳೆಯಾಗಿ ಬದಲಾಗುವುದರಿಂದ ಅವರಲ್ಲಿ ಪುರುಷರ ಶಕ್ತಿ ಇರಲಿದ್ದು, ಇದರಿಂದ ಬೌಲಿಂಗ್ ವೇಗ, ಶಕ್ತಿ ಸಾಮಥ್ರ್ಯ ಜಾಸ್ತಿ ಇರುತ್ತದೆ. ಹೀಗಾಗಿ ಮಂಗಳಮುಖಿಯರು ಮಹಿಳಾ ಕ್ರಿಕೆಟ್‍ನಲ್ಲಿ ಆಡುವುದರಿಂದ ಮಹಿಳಾ ಕ್ರಿಕೆಟ್‍ಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಐಸಿಸಿ ಹೇಳಿದೆ.

ನೂತನ ಐಸಿಸಿ ನಿಯಮಗಳ ಪ್ರಕಾರ, ಯಾವುದೇ ಪ್ಲೇಯರ್ ಪುರುಷನಿಂದ ಮಹಿಳೆಯಾಗಿ ಬದಲಾಗಿದ್ದರೆ ಅಥವಾ ಯಾವುದೇ ರೀತಿಯ ಸರ್ಜರಿ ಮಾಡಿ ಸಂಪೂರ್ಣವಾಗಿ ಮಹಿಳೆಯಾಗಿ ಬದಲಾಗಿದ್ದರೂ ಮಹಿಳಾ ಕ್ರಿಕೆಟ್‍ನಲ್ಲಿ ಪಾಲ್ಗೊಳ್ಳಲು ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.

Leave a Comment

Your email address will not be published. Required fields are marked *