Ad Widget .

ಇಂದು ಜಿ-20 ವರ್ಚುವಲ್ ಸಭೆ/ ಮೋದಿ ಅಧ್ಯಕ್ಷತೆ

ಸಮಗ್ರ ನ್ಯೂಸ್: ಇಂದು ಜಿ-20 ನಾಯಕರ ವರ್ಚುವಲ್ ಶೃಂಗಸಭೆಯು ನಡೆಯಲಿದ್ದು, ಪ್ರಧಾನಿ ಮೋದಿ ಇದರ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಭಾಗವಹಿಸುತ್ತಿದ್ದು, ಸಂಜೆ 5.3ಒ ರಿಂದ ಸಭೆ ನಡೆಯಲಿದೆ.

Ad Widget . Ad Widget .

ಈ ಸಭೆಯು ಕಳೆದ ಸೆಪ್ಟಂಬರ್‍ನಲ್ಲಿ ನಡೆದ ಶೃಂಗಸಭೆಯ ಫಲಿತಾಂಶಗಳು ಹಾಗೂ ನಂತರದ ಬೆಳವಣಿಗೆಗಳ ಕುರಿತು ಅವಲೋಕನ ನಡೆಸಲಿದೆ. ಇದರ ಜೊತೆಗೆ ಜಾಗತಿಕ ಆರ್ಥಿಕತೆ, ಹಣಕಾಸು, ಹವಾಮಾನ ಕಾರ್ಯಸೂಚಿ ಮತ್ತು ಡಿಜಿಟಲೀಕರಣದ ಕುರಿತು ಚರ್ಚೆ ನಡೆಸಲಿದ್ದಾರೆ.

Ad Widget . Ad Widget .

ಈ ವರ್ಚುವಲ್ ಶೃಂಗಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಲಿದ್ದು, ಎಲ್ಲಾ ಜಿ-20 ಸದಸ್ಯ ರಾಷ್ಟ್ರದ ನಾಯಕರು, 9 ಆತಿಥೇಯ ರಾಷ್ಟ್ರಗಳು ಮತ್ತು 11 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Leave a Comment

Your email address will not be published. Required fields are marked *