ಸಮಗ್ರ ಸಮಾಚಾರ: ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿರೋ ಮುಸ್ಲಿಂ ಸಮುದಾಯದ ದಾರುಲ್ ಉಲೂಮ್ ಸಾದಿಯಾ ಅನಾಥಾಶ್ರಮದಲ್ಲಿ ಮಕ್ಕಳಿಗೆ ಇಸ್ಲಾಂ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂನ್ಗೊ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವ್ಯವಹಾರ ನಡೆಯುತ್ತಿರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೆ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನೋಟಿಸ್ ನೀಡುವುದಾಗಿ ಹೇಳಿದ್ದಾರೆ.
ಅನಾಥಾಶ್ರಮದಲ್ಲಿರುವ 200 ಮಕ್ಕಳನ್ನು ಶಾಲೆಗೂ ಕಳುಹಿಸಲಾಗುತ್ತಿಲ್ಲ. ಇಸ್ಲಾಂ ಧಾರ್ಮಿಕ ಶಿಕ್ಷಣ ಮಾತ್ರ ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಹೇಳಿದ್ದಾರೆ.
ಇಲ್ಲಿ ಇರುವ ಮಕ್ಕಳು ಮಧ್ಯಯುಗದ ತಾಲಿಬಾನ್ ರೀತಿಯಲ್ಲಿ ಬದುಕುತ್ತಿದ್ದಾರೆ. ಇಲ್ಲಿ ಸುಮಾರು 200 ಮಕ್ಕಳಿದ್ದಾರೆ. ಮಸೀದಿಯ ನಮಾಜ್ ಮಾಡುವ ಎರಡು ಹಾಲ್‌ಗಳಲ್ಲಿ ಮಲಗುತ್ತಾರೆ. ಆಟದ ವಸ್ತುಗಳಿಲ್ಲ, ಟಿವಿ ಇಲ್ಲ, ಮುಗ್ಧ ಮಕ್ಕಳು ಮೌಲ್ವಿಗಳನ್ನು ನೋಡಿದ ತಕ್ಷಣ ಭಯಪಡ್ತಾರೆ. ಇದು ಕರ್ನಾಟಕ ಸರ್ಕಾರದ ನಿರ್ಲಕ್ಷ್ಯ, ಸಂವಿಧಾನದ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.
ಅನಾಥಾಶ್ರಮದಲ್ಲಿ ತಪಾಸಣೆ ನಡೆಸಿದ ಬಗ್ಗೆ ಮತ್ತು ಅಲ್ಲಿನ ಅಕ್ರಮಗಳ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸುವ ಮೂಲಕ ಅವರು ಮಾಹಿತಿ ನೀಡಿದ್ದಾರೆ. ಇದು ಕರ್ನಾಟಕ ಸರ್ಕಾರದ ನಿರ್ಲಕ್ಷ್ಯವಾಗಿದ್ದು, ಸಂವಿಧಾನದ ಉಲ್ಲಂಘನೆಯಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಲಿದೆ’ ಎಂದು ಪ್ರಿಯಾಂಕ್ ಕಾನೂನ್ X ನಲ್ಲಿ ತಿಳಿಸಿದ್ದಾರೆ.