ಸಮಗ್ರ ನ್ಯೂಸ್: ಬನ್ನೂರು ಕೃಷ್ಣ ನಗರ ಅಲುಂಬುಡ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ. 15ರಂದು ಮಕ್ಕಳ ದಿನಾಚರಣೆಯನ್ನು ಆಚರಸಲಾಯಿತು.
ನಂತರ ಆಟೋಟ ಸ್ಪರ್ಧೆಗಳಿಂದ ಆರಂಭಗೊಂಡು , ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಹುಭಾಷಾ ಮಕ್ಕಳ ಸಾಹಿತಿ ಉಲ್ಲಾಸಣ್ಣ (ಯು.ಕೆ.ಪೈ) ಅವರು ಪಾಲ್ಗೊಂಡು ಕಾರ್ಯಕ್ರಮದ ಔಚಿತ್ಯದ ಬಗ್ಗೆ ತಿಳಿಸಿದರು ಹಾಗೆಯೇ ಮಕ್ಕಳೊಂದಿಗೆ ಮಕ್ಕಳಾಗಿ ಶಿಶು ಗೀತೆಗಳನ್ನು ಮಕ್ಕಳಿಗೆ ಅಭಿನಯದ ಮೂಲಕ ಹೇಳಿಕೊಟ್ಟರು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದರು. ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳೆಲ್ಲರೂ ಸೇರಿ ಕೇಕ್ ಕಟ್ಟ್ ಮಾಡುವ ಮೂಲಕ ಸಂಭ್ರಮಿಸಿದರು. ನಂತರ ಎಲ್ಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ನಿರ್ದೇಶಕ ಗಂಗಾಧರ ಗೌಡ, ಶ್ರೀ ಅವಿನಾಶ್ ಕೆ.ಟಿ, ಹಾಗೂ ಪೋಷಕ ವೃಂದದವರು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲೆಯ ಸಹ ಶಿಕ್ಷಕಿ ಯಶುಭ ರೈ ಹಾಗೂ ಶಾಲೆಯ ಶಿಕ್ಷಕೇತರ ವೃಂದದ ಭುವನೇಶ್ವರಿ, ತಿಮ್ಮಪ್ಪ ಗೌಡ ಸಹಕರಿಸಿದರು, ಸಹಭೋಜನದೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಉಷಾ ಕಿರಣ ಕೆ.ಎಸ್. ಇವರು ಎಲ್ಲರನ್ನೂ ಸ್ವಾಗತಿಸಿ, ಎವಿಜಿ ಸಂಸ್ಥೆಯ ಉಪಾಧ್ಯಕ್ಷ ಉಮೇಶ್ ಮಳುವೇಲು ಇವರು ವಂದಿಸಿ, ಸಹ ಶಿಕ್ಷಕಿ ವನಿತಾ ರವರು ಕಾರ್ಯಕ್ರಮ ನಿರೂಪಿಸಿದರು.