Ad Widget .

ಹಿಂದೂ ಕಾರ್ಯಕರ್ತರ ಗಡಿಪಾರು ನೋಟಿಸ್ ಖಂಡಿಸಿ|ಸುಳ್ಯದಲ್ಲಿ ವಿಶ್ವ ಹಿಂದೂ ಪರುಷದ್ ಬಜರಂಗ ದಳದ ವತಿಯಿಂದ ಪ್ರತಿಭಟನೆ

ಸಮಗ್ರ ನ್ಯೂಸ್: ಬಜರಂಗದಳದ ಕಾರ್ಯಕರ್ತರ ಮೇಲೆ ಗಡಿಪಾರು ನೋಟೀಸ್ ಜಾರಿ ಮಾಡಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ತಿಕ್ಕುವ ಹಿಂದೂ ವಿರೋಧಿ ಆಡಳಿತ ವ್ಯವಸ್ಥೆಯ ವಿರುದ್ಧ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ವತಿಯಿಂದ ಬೃಹತ್ ಪ್ರತಿಭಟನೆ ಸುಳ್ಯ ತಾಲೂಕು ಕಛೇರಿ ಬಳಿ ನಡೆಯಿತು.

Ad Widget . Ad Widget .

ವಿಶ್ವ ಹಿಂದೂ ಪರಿಷದ್ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಗೋಸಾಗಾಟ, ಗೋ ಕಳ್ಳತನ, ಅಕ್ರಮ ಮರಳುಗಾರಿಕೆ, ರೌಡಿಸಂ ನಡೆಯುತ್ತಿದ್ದು, ಇದರಲ್ಲಿ ಎಷ್ಟು ಜನರ ಮೇಲೆ ಗಡಿಪಾರು ಮಾಡಲಾಗಿದೆ ಎಂದು ಪ್ರಶ್ನಿಸಿದ ಅವರು, ಗೋ ರಕ್ಷಣೆ, ಹೆಣ್ಣುಮಕ್ಕಳ ರಕ್ಷಣೆ, ದೇಶಕ್ಕಾಗಿ ಕೆಲಸ ಮಾಡುತ್ತಿರುವ ಹಿಂದೂ ಕಾರ್ಯಕರ್ತರ ಗಡಿಪಾರು ಪ್ರಯತ್ನ ಸರಿಯಲ್ಲ. ಸರಕಾರ ಗಡಿಪಾರು ಆದೇಶವನ್ನು ತಕ್ಷಣ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು. ದೇಶ ಪ್ರೇಮಿ ಸಂಘಟನೆ ಹಾಗೂ ದೇಶ ದ್ರೋಹಿ ಸಂಘಟನೆಯನ್ನು ಒಂದೆ ತಟ್ಟೆಯಲ್ಲಿ ಹಾಕಿ ತೂಗಬೇಡಿ ಎಂದರು.

Ad Widget . Ad Widget .

ನ.ಪಂ.ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಮಾತನಾಡಿ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಎಸ್ಡಿಪಿಐ ಕಾರ್ಯಕರ್ತರ ಬಿಡುಗಡೆಗೆ ಪ್ರಯತ್ನಿಸುತ್ತಿರುವ ಸರಕಾರ ಹಿಂದೂ ಕಾರ್ಯಕರ್ತರ ಗಡಿಪಾರಿಗೆ ನೋಟೀಸ್ ನೀಡಿರುವುದು ದುರದೃಷ್ಟಕರ. ಹಿಂದುತ್ವ ಉಳಿದಲ್ಲಿ ಮಾತ್ರ ದೇಶಕ್ಕರ ಭವಿಷ್ಯ. ಹಿಂದೂ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡಬೇಡಿ ಎಂದರು.

ಪ್ರಮುಖರಾದ ರಾಕೇಶ್ ರೈ ಕೆಡೆಂಜಿ, ಸುಭೋದ್ ಮೆನಾಲ, ಪುನೀತ್ ಅತ್ತಾವರ, ಮಹೇಶ್ ಮೆನಾಲ, ವರ್ಷಿತ್, ರಾಧಕೃಷ್ಣ ಬೂಡು ಮತ್ತಿತರರು ಉಪಸ್ಥಿತರಿದ್ದರು. ಸುಳ್ಯ ಪೊಲೀಸರು ಭದ್ರತೆ ಕಲ್ಪಿಸಿದ್ದರು. ಬಳಿಕ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Leave a Comment

Your email address will not be published. Required fields are marked *