ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹೆಲ್ಮೆಟ್ ನಿಂದ ಹಲ್ಲೆ| ಓರ್ವ ಅಂದರ್

ಸಮಗ್ರ ನ್ಯೂಸ್:ಕರ್ತವ್ಯನಿರತರಾಗಿದ್ದ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ವ್ಯಕ್ತಿಯೊಬ್ಬರು ಹೆಲ್ಮೆಟ್ ನಿಂದ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ನಡೆದಿದೆ.

Ad Widget ... ..

ಪೊಲೀಸ್ ಕಾನ್ಸ್ ಟೇಬಲ್ ಸಂತೋಷ್ ಚೌಹಾನ ಎಂಬುವವರು
ಸಿದ್ದಾಪುರ ಬಸ್ ನಿಲ್ದಾಣದ ಬಳಿ
ಕರ್ತವ್ಯದಲ್ಲಿ ಸಂದರ್ಭ ಗುಹ್ಯ ಗ್ರಾಮದ ನಿವಾಸಿ ಸಿ.ಎ.ಗಣಪತಿ ಎಂಬುವವರು ಖ್ಯಾತೆ ತೆಗೆದು ಹೆಲ್ಮೆಟ್ ನಿಂದ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಅಲ್ಲದೇ ಅವ್ಯಾಚ ಪದ ಬಳಸಿದ್ದಾರೆ. ಪೊಲೀಸ್ ಪೇದೆಯ ಮೇಲೆ ಇನ್ನಷ್ಟು ಹಲ್ಲೆಗೆ ಮುಂದಾದಾಗ ಅಲ್ಲಿದ್ದವರು ಸಿ.ಎ.ಗಣಪತಿಯನ್ನು ತಡೆದಿದ್ದಾರೆ.

Ad Widget

ಹಲ್ಲೆಯ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ವೈರಲ್ ಆಗಿದೆ. ಆರೋಪಿ ಸಿ.ಎ.ಗಣಪತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮಂದಿನ ಕ್ರಮ ಕೈಗೊಳ್ಳಲಾಗಿದೆ.

Leave a Comment

Your email address will not be published. Required fields are marked *