Ad Widget .

ಭರ್ತಿಯಾಗದ ಹುದ್ದೆಗಳು/ ಇಂದಿನಿಂದ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಸಮಗ್ರ ನ್ಯೂಸ್: ಬೆಂಗಳೂರು ನಗರದ ಅಂಗನವಾಡಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಂದಿನಿಂದ ಅನಿರ್ಧಷ್ಟಾವಧಿಯವರೆಗೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಇಐಟಿಯುಸಿಯ ಜಯಮ್ಮ ಅವರ ನೇತೃತ್ವದಲ್ಲಿ ಫ್ರೀಡಂಪಾರ್ಕ್‍ನಲ್ಲಿ ಇಂದಿನಿಂದ ಪ್ರತಿಭಟನೆ ನಡೆಯಲಿದೆ.

Ad Widget . Ad Widget .

2877 ಅಂಗನವಾಡಿ ಕೇಂದ್ರಗಳು ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 430 ಅಂಗನವಾಡಿ ಕಾರ್ಯಕರ್ತೆಯರು ಮತ್ತು 1198 ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಕಳೆದ ಮಾರ್ಚ್ 5ರಂದು ನೇಮಕಾತಿ ಪ್ರಕಟನೆ ಹೊರಡಿಸಲಾಗಿದ್ದು, ಸಾಕಷ್ಟು ಅರ್ಜಿಗಳು ಬಂದಿರುತ್ತವೆ. ಆದರೆ ಅಜಿ ಹಾಖಿ ಹಲವು ತಿಂಗಳುಗಳು ಕಳೆದರೂ, ನೇಮಕಾತಿ ಪ್ರಕ್ರಿಯೆಗಳು ನಡೆದಿರುವುದಿಲ್ಲ. ಅಂಗನವಾಡಿಗಳಲ್ಲಿ ಸಾಕಷ್ಟು ಕೆಲಸಗಳು ಇದ್ದು, ಒಬ್ಬರೇ ನಿಭಾಯಿಸಲು ಸಾಧ್ಯವಿಲ್ಲವಾದ್ದರಿಂದ ಈ ಕೂಡಲೇ ನೇಮಕಾತಿ ಮಾಡಿ ಎಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *