ಗಡಿ ದಾಟಿದ ಮ್ಯಾನ್ಮಾರ್ ಸೈನಿಕರು/ ವಾಪಸ್ ಕಳುಹಿಸಿದ ಭಾರತ

ಸಮಗ್ರ ನ್ಯೂಸ್: ಭಾರತದೊಳಗೆ ಗಡಿ ದಾಟಿ ಬಂದಿದ್ದ 29 ಮ್ಯಾನ್ಮಾರ್ ಸೈನಿಕರನ್ನು ಭಾರತದ ಅಧಿಕಾರಿಗಳು ಭಾನುವಾರ ವಾಪಸ್ ಕಳುಹಿಸಿದ್ದಾರೆ.

Ad Widget ... ..

ನಾಗರಿಕ ಸಶಸ್ತ್ರ ಪಡೆಗಳು ಮ್ಯಾನ್ಮಾರ್‌ನ ಚಿನ್‌ ರಾಜ್ಯದ ತುಯಿಬುಲ್ ನಲ್ಲಿರುವ ಶಿಬಿರವನ್ನು ವಶಪಡಿಸಿಕೊಂಡ ಕಾರಣ ಮ್ಯಾನ್ಮಾರ್ ಸೈನಿಕರು ನವೆಂಬರ್ 16ರಂದು ಗಡಿ ದಾಟಿ ಮಿಜೋರಾಂಗೆ ನುಸುಳಿ ಬಂದಿದ್ದರು.

Ad Widget

ಈ 29 ಮ್ಯಾನ್ಮಾರ್ ಸೈನಿಕರನ್ನು ಭಾರತೀಯ ವಾಯುಪಡೆಯ (ಐಎಎಫ್) ಎರಡು ಹೆಲಿಕಾಪ್ಟರ್‌ಗಳು ಮಿಜೋರಾಂನ ಚಂಫೈನಿಂದ ಮಣಿಪುರದ ಮೋರೆಹ್ ಪಟ್ಟಣಕ್ಕೆ ಏರ್‌ಲಿಸ್ಟ್‌ ಮಾಡಿ ಅವರನ್ನು ಮ್ಯಾನ್ಮಾರ್‌ನ ಮಿಲಿಟರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *