Ad Widget .

ಚಿಕ್ಕಮಗಳೂರು: ದೇವರಮನೆ ರಸ್ತೆ ಸೇತುವೆ ಶಿಥಿಲ,ದುರಸ್ತಿಗೊಳಿಸಲು ಸಾರ್ವಜನಿಕರ ಒತ್ತಾಯ

ಸಮಗ್ರ ನ್ಯೂಸ್: ಮಲೆನಾಡಿನ ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳ ದೇವರಮನೆಗೆ ಸಾಗುವ ರಸ್ತೆಯ ಇಕ್ಕಟ್ಟಾದ ಸೇತುವೆ ಶಿಥಿಲಗೊಂಡಿದ್ದು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Ad Widget . Ad Widget .

ಈ ಕುರಿತಂತೆ ಸ್ಥಳೀಯ ಮುಖಂಡ ಬಿ.ಸಿ ಪ್ರವೀಣ್ ಮಾತನಾಡಿ ‘ ದೇವರಮನೆ ಧಾರ್ಮಿಕ ಕ್ಷೇತ್ರವಾಗಿದ್ದು ಈ ರಸ್ತೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಬರುತ್ತಿದ್ದಾರೆ. ಆದರೆ ಸೇತುವೆ ಬಾರಿ ಹಳೆಯ ಸೇತುವೆಯಾಗಿದ್ದು ಅದು ಈಗ ಶಿಥಿಲಗೊಂಡು ರಸ್ತೆಯ ಮೇಲೆ ಕಂದಕ ನಿರ್ಮಾಣವಾಗಿದೆ.ಆದರೆ ರಸ್ತೆಯು ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಗ್ರಾಮಸ್ಥರಿಗೂ ತೊಂದರೆಯಾಗಿದೆ. ಈ ರಸ್ತೆಯಲ್ಲಿ ಸರಕು ತುಂಬಿದ ವಾಹನಗಳು, ಪ್ರವಾಸಿಗರ ವಾಹನಗಳು ತಿರುಗುತ್ತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈ ರಸ್ತೆ ಹಾಗೂ ಸೇತುವೆ ದುರಸ್ತಿಗೆ ಶಾಸಕಿ ನಯನಾ ಮೋಟಮ್ಮ ಅವರಿಂದಲೂ ಸಂಬಂಧಿಸಿದ ಅಧಿಕಾರಿಗಳಿಗೆ ಶಿಪಾರಸು ಪತ್ರವನ್ನು ನೀಡಲಾಗಿದೆ.

Ad Widget . Ad Widget .

ಆದರೆ ಈ ರಸ್ತೆ ದೇವರಮನೆ ದೇವಸ್ಥಾನಕ್ಕೆ ತೆರಳುವ ಪ್ರಮುಖ ರಸ್ತೆಯಾಗಿದ್ದು ಪ್ರವಾಸಿಗರ ವಾಹನಗಳು ಮಂಜು ಕವಿದ ವಾತಾವರಣ ಇರುವುದರಿಂದ ಇಲ್ಲಿ ಅಪಘಾತ ಸಂಭವಿಸಿ ಪ್ರಾಣಹಾನಿಯಾಗುವ ಸಾಧ್ಯತೆಗಳಿವೆ. ಈಗ ಈ ರಸ್ತೆಗೆ ಕಾಮಗಾರಿಗೆ ಅನುದಾನ ಬರುವವರೆಗೂ ತಾತ್ಕಾಲಿಕ ರಸ್ತೆ ನಿರ್ಮಿಸಿ ಈ ಸೇತುವೆ ಮೇಲೆ ಸಂಚಾರ ಸ್ಥಗಿತಗೊಳಿಸುವುದರಿಂದ ಸಂಪರ್ಕ ಸೇತುವೆ ಉಳಿಯಲಿದೆ. ಹಾಗೂ ಈ ರಸ್ತೆಯಲ್ಲಿ ಘನ ಹಾಗೂ ಟೆಂಪೊ, ಮಿನಿ ಬಸ್ ಸಂಚಾರ ಸ್ಥಗಿತಗೊಳಿಸಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಬೇಕು. ಕೆಲವು ದಿನದ ಹಿಂದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ.ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನೂತನ ಸೇತುವೆ ಆಗುವವರೆಗೂ ತಾತ್ಕಾಲಿಕ ರಸ್ತೆ ನಿರ್ಮಿಸಬೇಕೆಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *