ಕೊಹ್ಲಿ ವಿಶ್ವದಾಖಲೆ/ ಜೆರ್ಸಿ ಉಡುಗೊರೆ ನೀಡಿದ ಸಚಿನ್

ಸಮಗ್ರ ನ್ಯೂಸ್: ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ವಿರಾಟ್‌ ಕೊಹ್ಲಿ ಅವರಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಧರಿಸಿ ಆಡಿದ್ದ ನಂಬರ್ 10 ಜೆರ್ಸಿಯನ್ನು ಕಾಣಿಕೆಯಾಗಿ ನೀಡಿದ್ದಾರೆ.

Ad Widget ... ..

2012ರಲ್ಲಿ ಏಷ್ಯಾ ಕಪ್ ಟೂರ್ನಿಯ ಮೀರ್‌ಪುರದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊನೆಯದಾಗಿ ಸಚಿನ್ ಈ ಜೆರ್ಸಿ ಧರಿಸಿದ್ದರು.

Ad Widget

ಸಚಿನ್ ಏಕದಿನ ಮಾದರಿಯಲ್ಲಿ 49 ಶತಕ ಗಳಿಸಿದ್ದಾರೆ. ಕೊಹ್ಲಿ ಇತ್ತೀಚೆಗೆ 50ನೇ ಶತಕವನ್ನು ಬಾರಿಸುವುದರ ಮೂಲಕ ಸಚಿನ್ ಅವರ ದಾಖಲೆಯನ್ನು ಮುರಿದಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ ‘ಇದೊಂದು ವಿಶೇಷ ಗಳಿಗೆಯಾಗಿದೆ. ದಿಗ್ಗಜ ಸಚಿನ್‌ ತೆಂಡೂಲ್ಕ‌ರ್ ಅವರು ವಿರಾಟ್ ಕೊಹ್ಲಿಗೆ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಆಡುವಾಗ ಧರಿಸಿದ್ದ ಜೆರ್ಸಿಯನ್ನು ನೀಡಿದ್ದಾರೆ’ ಎಂದು ಹೇಳಿದೆ.

Leave a Comment

Your email address will not be published. Required fields are marked *