ವಿಶ್ವಕಪ್ ಕ್ರಿಕೆಟ್ ಫೈನಲ್| 240 ರನ್ ಗೆ ಭಾರತವನ್ನು ಕಟ್ಟಿ ಹಾಕಿದ ಆಸೀಸ್

ಸಮಗ್ರ ನ್ಯೂಸ್: ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 240 ರನ್ ಗಳಿಗೆ ಆಲೌಟ್ ಆಯಿತು.

Ad Widget ... ..

ಟಾಸ್ ಸೋತು ಬ್ಯಾಟಿಂಗ್ ಗೆ ಬಂದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕ 10 ಓವರ್ಗಳಲ್ಲಿ ಓವರ್ಗೆ 8 ರನ್ ಗಳ ಸರಾಸರಿಯಲ್ಲಿ ರನ್ ಗಳಿಸಿದ ಭಾರತ ತಂಡ, ಶುಭಮನ್ ಗಿಲ್ 4 ರನ್ ಗೆ ಔಟ್ ಆಗುವುದರೊಂದಿಗೆ ಆಘಾತ ಅನುಭವಿಸಿತು.

Ad Widget

31 ಎಸೆತಗಳಲ್ಲಿ 47 ರನ್ ಗಳಿಸಿದ ರೋಹಿತ್ ಶರ್ಮಾ ಸ್ವಲ್ಪ ಮಟ್ಟಿಗೆ ಭರವಸೆ ಮೂಡಿಸಿದರೂ, ಅದು ಹೆಚ್ಚು ಸಮಯ ಉಳಿಯಲಿಲ್ಲ. ಗ್ಲೆನ್ ಮ್ಯಾಕ್ಸ್ವೆಲ್ ಓವರ್ನಲ್ಲಿ ಟ್ರಾವಿಸ್ ಹೆಡ್ ಪಡೆದ ಅದ್ಭುತ ಕ್ಯಾಚ್ ರೋಹಿತ್ ಶರ್ಮಾಗೆ ಪೆವಿಲಿಯನ್ ದಾರಿ ತೋರಿಸಿತು. ರೋಹಿತ್ ಶರ್ಮಾ ವಿಕೆಟ್ ಉರುಳಿದಾಗ ಗ್ಲೆನ್ ಮ್ಯಾಕ್ಸ್ವೆಲ್ ಸಂಭ್ರಮಿಸಿದರು.

Leave a Comment

Your email address will not be published. Required fields are marked *