Ad Widget .

ಸುಬ್ರಹ್ಮಣ್ಯ: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸಿದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸಹಿ ಸಂಗ್ರಹ ಅಭಿಯಾನ

ಸಮಗ್ರ ನ್ಯೂಸ್: NEP ಯನ್ನು ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಸುಬ್ರಹ್ಮಣ್ಯ ಶಾಖೆಯಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.

Ad Widget . Ad Widget .

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪದ್ಮಕುಮಾರ್ ಗುಂಡಡ್ಕ NEP ಯ ಮಹತ್ವ ಮತ್ತು NEP ಯನ್ನು ರದ್ದುಗೊಳಿಸಿದಲ್ಲಿ ಆಗುವ ಪರಿಣಾಮಗಳನ್ನು ನೆರೆದಿದ್ದ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಿಗೆ ಮನದಟ್ಟು ಮಾಡಿ, ರಾಜ್ಯ ಸರ್ಕಾರ ಈ ಕೂಡಲೇ ಈ ನಿರ್ಧಾರವನ್ನು ಕೈ ಬಿಡಬೇಕು ಇಲ್ಲದಿದ್ದಲ್ಲಿ ವಿದ್ಯಾರ್ಥಿ ಶಕ್ತಿಯನ್ನು ಎದುರಿಸುವ ಅಪಾಯ ಸರಕಾರಕ್ಕೆ ಬರುವುದು ಎಂದು ಸರಕಾರಕ್ಕೆ ಎಚ್ಚರಿಸಿದರು.

Ad Widget . Ad Widget .

ಎಬಿವಿಪಿ ಸುಬ್ರಹ್ಮಣ್ಯ ನಗರ ಕಾರ್ಯದರ್ಶಿ ಹೇಮಂತ , ಹಿರಿಯ ಕಾರ್ಯಕರ್ತರದ ಇಲೈಅರಸ್, ಸಾಯಿ ಸೃಜನ್ , ರಾಮಚಂದ್ರ, ಮನೀಷ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಎಬಿವಿಪಿ ಸುಳ್ಯ ತಾಲೂಕು ಸಂಚಾಲಕ ಸುಹಾಸ್ ಮಲ್ಲಾರ ಎಲ್ಲರನ್ನೂ ಸ್ವಾಗತಿಸಿ, ವಂದಿಸಿದರು.
ಸುಮಾರು 500ಕ್ಕೂ ಅಧಿಕ ಜನರು ಭಾಗವಹಿಸಿ ಬೆಂಬಲ ಸೂಚಿಸಿದರು.

Leave a Comment

Your email address will not be published. Required fields are marked *