Ad Widget .

ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ| ನ್ಯಾಯಕ್ಕಾಗಿ ನಾಳೆ(ನ.20) ಸುಳ್ಯದ ಉಬರಡ್ಕದಲ್ಲಿ ಬೃಹತ್ ಪ್ರತಿಭಟನಾ ಸಭೆ

ಸಮಗ್ರ ನ್ಯೂಸ್: ಹನ್ನೆರಡು ವರ್ಷಗಳ‌ ಹಿಂದೆ ಧರ್ಮಸ್ಥಳದ ಪಾಂಗಾಳ ಸಮೀಪ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕಿನ ಉಬರಡ್ಕದಲ್ಲಿ ನಾಳೆ(ನ. ೨೦) ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.

Ad Widget . Ad Widget .

ರಾಜ್ಯಾದ್ಯಂತ ಸೌಜನ್ಯ ಪರ ಹೋರಾಟಗಾರರು ಪ್ರಕರಣವನ್ನು ಮರುತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನ.20 ರಂದು ಸೌಜನ್ಯ ಪರ ನ್ಯಾಯಕ್ಕಾಗಿ ಉಬರಡ್ಕದಲ್ಲಿ ಬೃಹತ್ ಪ್ರತಿಭಟನಾ ಸಭೆಗೆ ವೇದಿಕೆ ತಯಾರಾಗಿದ್ದು ಸುಮಾರು 3000ಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆ ಎಂದು ಸಂಘಟಕರು ತಿಳಿಸಿದ್ದಾರೆ.

Ad Widget . Ad Widget .

ಉಬರಡ್ಕದಿಂದ ಮಿತ್ತೂರು ಹೋಗುವ ರಸ್ತೆ ಬದಿ ವಿಶಾಲ ಜಾಗವನ್ನು ಸಮತಟ್ಟು ಗೊಳಿಸಲಾಗಿದೆ. ಪಾರ್ಕಿಂಗ್ ಗಾಗಿ ಉಬರಡ್ಕ ಪೇಟೆ, ಪಂಚಾಯತ್ ಎದುರಿನ ಜಾಗ ಹಾಗೂ ಉಬರಡ್ಕದಿಂದ ಕಂದಡ್ಕ ಹೋಗುವ ರಸ್ತೆ ಬದಿ ವ್ಯವಸ್ಥೆ ಮಾಡಲಾಗಿದೆ.

ಪ್ರತಿಭಟನಾ ಸಭೆಗೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ತುಳು ವಾಗ್ಮಿ‌ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ನಿವೃತ್ತ ಪೋಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ , ನ್ಯಾಯವಾದಿ ಮೋಹಿತ್ ಕುಮಾರ್ , ಸೌಜನ್ಯಳ ತಾಯಿ ಕುಸುಮಾವತಿ ಆಗಮಿಸಲಿದ್ದಾರೆ.

Leave a Comment

Your email address will not be published. Required fields are marked *