Ad Widget .

ಭಾರತಕ್ಕೆ ತಲೆನೋವಾದ ‘ಹೆಡ್’| 6ನೇ ‌ಬಾರಿಗೆ ವಿಶ್ವಕಪ್ ಎತ್ತಿದ ಆಸ್ಟ್ರೇಲಿಯಾ

ಸಮಗ್ರ ನ್ಯೂಸ್: ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ಬ್ಯಾಟರ್‌ ಟ್ರಾವೆಸ್‌ ಹೆಡ್‌ ಅವರ ಆಟಕ್ಕೆ ಸೋಲೊಪ್ಪಿಕೊಂಡಿತು. ಭಾರತದ ಬೌಲರ್ ಗಳನ್ನು ದಂಡಿಸಿದ ಆಟ ಪ್ರದರ್ಶಿಸಿದ ಟ್ರಾವೆಸ್‌ ಹೆಡ್‌ 137 ರನ್‌ ಗಳಿಸಿ ಆಸ್ಟ್ರೇಲಿಯಾಗೆ 6 ನೇ ಬಾರಿ ವಿಶ್ವಕಪ್‌ ಗೆಲ್ಲಿಸಿಕೊಟ್ಟರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

2ನೇ ಓವರ್‌ನಲ್ಲಿ ಶಮಿ ಬೌಲಿಂಗ್‌ ನಲ್ಲಿ ಡೇವಿಡ್‌ ವಾರ್ನರ್‌ 7 ರನ್‌ ಗಳಿಸಿದ್ದಾಗ ವಿರಾಟ್‌ ಕೊಹ್ಲಿಗೆ ಕ್ಯಾಚ್‌ ನೀಡಿ ಔಟ್‌ ಆದರು. ಮಿಷೆಲ್‌ ಮಾರ್ಷ್‌ 15 ರನ್‌ ಗಳಿಸಿ 4.3 ಓವರ್‌ನಲ್ಲಿ ಬೂಮ್ರಾ ಬೌಲಿಂಗ್‌ ನಲ್ಲಿ ಕೆ ಎಲ್‌ ರಾಹುಲ್‌ ಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಹಾದಿ ಹಿಡಿದರು. ಸ್ಟೀವನ್‌ ಸ್ಮಿತ್‌ 6.6 ಓವರ್‌ ಗಳಲ್ಲಿ 4 ರನ್‌ ಗಳಿಸಿ ಬೂಮ್ರಾ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ತೀವ್ರ ಒತ್ತಡಕ್ಕೆ ಸಿಲುಕಿದ ಆಸ್ಟ್ರೇಲಿಯಗೆ ಆಸರೆಯಾದವರು ಟ್ರಾವೆಸ್‌ ಹೆಡ್‌.

Ad Widget . Ad Widget . Ad Widget .

ರಕ್ಷಣಾತ್ಮಕ, ಅಗತ್ಯವಿದ್ದಾಗ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಟ್ರಾವೆಸ್‌ ಹೆಡ್‌ ಆತಿಥೇಯ ಭಾರತದ ಮೂರನೇ ವಿಶ್ವಕಪ್‌ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿದರು. ಟ್ರಾವೆಸ್‌ ಹೆಡ್‌ 120 ಎಸೆತಗಳಲ್ಲಿ 15 ಬೌಂಡರಿ 4 ಸಿಕ್ಸರ್‌ ಸಹಿತ 137 ರನ್‌ ಗಳಿಸಿ ವಿನ್ನಿಂಗ್‌ ಶಾಟ್‌ ಹೊಡೆಯುವ ಯತ್ನದಲ್ಲಿ ಮುಹಮ್ಮದ್‌ ಸಿರಾಜ್‌ ಬೌಲಿಂಗ್‌ ನಲ್ಲಿ ಶುಭಮನ್‌ ಗಿಲ್‌ ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಬಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ 2 ರನ್‌ ಗಳಿಸುವ ಮೂಲಕ ಆಸ್ಟ್ರೇಲಿಯಾವನ್ನು ಗೆಲುವಿನ ದಡ ಸೇರಿಸಿದರು.

ಮಾರ್ನಸ್‌ ಲಾಬುಶೇನ್‌ 110 ಎಸೆತಗಳಲ್ಲಿ 4 ಬೌಂಡರಿ ಸಹಿತ 58 ರನ್‌ ಬಾರಿಸಿದರು. ಭಾರತದ ಪರ ಜಸ್ಪ್ರೀತ್‌ ಬೂಮ್ರಾ 2 ವಿಕೆಟ್‌ ಪಡೆದರು. ಮುಹಮ್ಮದ್‌ ಶಮಿ, ಮುಹಮ್ಮದ್‌ ಸಿರಾಜ್‌ ತಲಾ 1 ವಿಕೆಟ್‌ ಪಡೆದರು.

Leave a Comment

Your email address will not be published. Required fields are marked *