ಕಡಬ:ವಿದ್ಯುತ್ ಕಂಬಕ್ಕೆ ಬೊಲೆಲೋ ಡಿಕ್ಕಿ|ಪ್ರಯಾಣಿಕರು ಪಾರು

ಸಮಗ್ರ ನ್ಯೂಸ್: ಕಡಬ-ಪಂಜ ರಸ್ತೆಯ ಕೋಡಿಂಬಾಳ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ವಾಹನದಲ್ಲಿದ್ದವರು ಪವಾಡ ಸದೃಶವಾಗಿ ಪಾರಾದ ಘಟನೆ ಇಂದು (ನ.19) ಮುಂಜಾನೆ ಸಂಭವಿಸಿದೆ.

Ad Widget ... ..

ಸುಳ್ಯ ತಾಲೂಕಿನ ಕಲ್ಲುಗುಂಡಿಯ ಚೇತನ್ ಎಂಬವರ ಕುಟುಂಬಸ್ಥರು ಕಾರ್ಯಕ್ರಮದ ನಿಮಿತ್ತ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಕೋಡಿಂಬಾಳದಲ್ಲಿ ವಾಹನ ಅಪಘಾತವಾಗಿದೆ.

Ad Widget

ವಾಹನದಲ್ಲಿ ಮಗು ಸಹಿತ ಮೂರು ಮಂದಿ ಇದ್ದು ಜೀವ ಹಾನಿಯಿಂದ ಪಾರಾಗಿದ್ದಾರೆ. ವಾಹನ ಜಖಂ ಗೊಂಡಿದ್ದು ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಸ್ಥಳೀಯರು ಕೂಡಲೇ ಆಗಮಿಸಿ ವಾಹನದಲ್ಲಿದ್ದವರನ್ನು ಉಪಚರಿಸಿದ್ದಾರೆ.

Leave a Comment

Your email address will not be published. Required fields are marked *