Ad Widget .

ಪುತ್ತೂರು ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ವರ್ಗಾವಣೆ

ಸಮಗ್ರ ನ್ಯೂಸ್: ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಗಾನಾ ಪಿ.ಕುಮಾರ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆ ಆದೇಶದಲ್ಲಿರುವ ಅರುಣ್ ನಾಗೇಗೌಡ ಅವರನ್ನು ಪುತ್ತೂರು ಡಿವೈಎಸ್‌ಪಿಯಾಗಿ ವರ್ಗಾವಣೆಗೊಳಿಸಲಾಗಿದೆ.

Ad Widget . Ad Widget . Ad Widget .

ಈ ಹಿಂದೆ ಎರಡು ವರ್ಷಗಳ ಕಾಲ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ಸರಕಾರ ಸಿಐಡಿಗೆ ವರ್ಗಾವಣೆಗೊಳಿಸಿತ್ತು. ಆ ಬಳಿಕ ಅವರ ವರ್ಗಾವಣೆ ರದ್ದುಗೊಳಿಸಿ ಎಸ್ಪಿ ಕಚೇರಿಯ ಡಿಸಿಆರ್‌ಬಿ ಡಿವೈಎಸ್ಪಿಯಾಗಿ ನಿಯೋಜಿಸಲಾಗಿತ್ತು. ಪುತ್ತೂರಿನಲ್ಲಿ ನಡೆದ ಬ್ಯಾನರ್ ಪ್ರಕರಣವೊಂದಕ್ಕೆ ಸಂಬಂಧಿಸಿ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ್ದ ಆರೋಪದಲ್ಲಿ ಪುತ್ತೂರಿನ ಆಗಿನ ಡಿವೈಎಸ್ಪಿಯಾಗಿದ್ದ ಡಾ|ವೀರಯ್ಯ ಹಿರೇಮಠ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿದ್ದ ಸಂದರ್ಭ ಪ್ರಭಾರ ಡಿವೈಎಸ್ಪಿಯಾಗಿ ಡಾ.ಗಾನಾ ಪಿ.ಕುಮಾರ್ ಅವರನ್ನು ನಿಯೋಜಿಸಲಾಗಿತ್ತು.

ಬಳಿಕ ಅವರನ್ನೇ ಪುತ್ತೂರು ಡಿವೈಎಸ್ಪಿಯಾಗಿ ಮುಂದುವರಿಸಲಾಗಿತ್ತು. ಇದೀಗ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಲಾಗಿದೆ.

Leave a Comment

Your email address will not be published. Required fields are marked *