Ad Widget .

ಸುಳ್ಯ:ಅರಣ್ಯದಂಚಿನ ನಿವಾಸಿಗಳ ವಸತಿ ಹಕ್ಕುಪತ್ರ, ಕೋವಿ ನವೀಕರಣ| ನ. 23 ರಂದು ಎಪಿಎಂಸಿ ಸಭಾಂಗಣದಲ್ಲಿ ಸಮಾಲೋಚನಾ ಸಭೆ

ಸಮಗ್ರ ನ್ಯೂಸ್:ಪೋಡಿ(Plotting) ಬಾಕಿ ಪ್ರಕ್ರಿಯೆಯ, ಅರಣ್ಯದಂಚಿನ ನಿವಾಸಿಗಳ ವಸತಿ ಹಕ್ಕು ಪತ್ರ ಕೋವಿ ನವೀಕರಣ ಮತ್ತು ಹೊಸ ಆಯುಧ ಪರವಾನಗಿ ಸಿಗದೆ ಇರುವವರನ್ನು ಸೇರಿಸಿ ಕಾನೂನು ಬದ್ಧವಾಗಿ ಲಿಖಿತವಾಗಿ ರೂಪದಲ್ಲಿ ಮನವಿ ಕೊಟ್ಟಾಗ ಪರವಾನಗಿ ಸಮಸ್ಯೆಯನ್ನು ಎದುರಿಸುವುದು ಸಾಧ್ಯ ಎಂದು ಅಶೋಕ್ ಎಡಮಲೆ ಅವರು ಹೇಳಿದರು.

Ad Widget . Ad Widget .

ಸುಳ್ಯ ಮಲೆನಾಡು ಜಂಟಿ ಕ್ರೀಯ ಸಮಿತಿ ವತಿಯಿಂದ ಪೋಡಿ (Plotting) ಬಾಕಿ ಪ್ರಕ್ರಿಯೆಯ, ಅರಣ್ಯದಂಚಿನ ನಿವಾಸಿಗಳ ವಸತಿ ಹಕ್ಕು ಪತ್ರ, ಕೋವಿ ನವೀಕರಣ ಮತ್ತು ಹೊಸ ಆಯುಧ ಪರವಾನಿಗೆ ಬಗ್ಗೆ ನ. 18ರಂದು ಪತ್ರಿಕಾ-ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಹೇಳಿದರು.

Ad Widget . Ad Widget .

ಮಲೆನಾಡು ಜಂಟಿ ಕ್ರಿಯಾ ಸಮಿತಿ ಸಂಚಾಲಕ ಪ್ರದೀಪ್ ಕುಮಾರ್ ಕೆ. ಎಲ್. ಮತ್ತು ಅಶೋಕ್ ಎಡಮಲೆ ನ. 23ನೇ ಗುರುವಾರ ಬೆಳಗ್ಗೆ 11 ಗಂಟೆಗೆ ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆಯಲಿರುವ ಸಭೆಯ ಬಗ್ಗೆ ತಿಳಿಸಿದರು. ಅಕ್ರಮ ಸಕ್ರಮ ಹಾಗೂ ವಿವಿಧ ರೀತಿಯಲ್ಲಿ ತಮ್ಮ ಜಮೀನಿನ ಪೋಡಿ ಪ್ರಕ್ರಿಯೆ ಹಲವಾರು ವರ್ಷಗಳಿಂದ ವಿಳಂಬವಾಗಿದ್ದು ಅವುಗಳನ್ನು ಕಂದಾಯ ಕಾಯ್ದೆಯಂತೆ ಪರಿಹರಿಸಿಕೊಳ್ಳಲು ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಿ ಜನರಿಗೆ ಅಗತ್ಯ ಸಲಹೆ ಸೂಚನೆ ಹಾಗೂ ಸಹಕಾರ ನೀಡಲಾಗುವುದು ಎಂದು ಹೇಳಿದರು. ಅರಣ್ಯದಂಚಿನ ನಿವಾಸಿಗಳ ವಸತಿ ಹಾಗೂ ಇನ್ನಿತರ ಕಾನೂನುಬದ್ಧ ಹಕ್ಕುಗಳನ್ನು ಅರಣ್ಯಹಕ್ಕು ಕಾಯ್ದೆಯಂತೆ ವಿಲೇವಾರಿಗೆ ಕ್ರಮ ವಹಿಸಲು, ಕೋವಿ ಹೊಂದಿರುವ ನಾಗರಿಕರು ಎದುರಿಸುತ್ತಿರುವ ಕೋವಿ ನವೀಕರಣ ಮತ್ತಿತರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸುವುದು. ಕೃಷಿ ಬೆಳೆಗಾರರು ಆಹಾರ, ಹಣ್ಣು ವಾಣಿಜ್ಯ ಬೆಳೆ, ಸಸಿಗಳ ಆಯ್ಕೆಯ ಗುಣಮಟ್ಟಿ, ಗೊಬ್ಬರ ಮತ್ತು ಔಷಧಿಗಳು ಹಾಗೂ ಮಾರುಕಟ್ಟೆ ವ್ಯವಸ್ಥೆ ಇತ್ಯಾದಿ ಒಟ್ಟು ಕೃಷಿ ನಿರ್ವಹಣೆಯಲ್ಲಿ ಆರ್ಥಿಕ ಏರುಪೇರಿನ ಸಂಕಷ್ಟಗಳಿಗೆ ಒಳಗಾಗುವ ಪರಿಸ್ಥಿತಿಯಲ್ಲಿ ಮುಂದಿನ ಕನಿಷ್ಟ ಹತ್ತು ವರ್ಷಗಳ ಅವಧಿಗೆ ಪೂರಕ ನುರಿತ ತಜ್ಞರ, ರೈತರ ಪ್ರಾಯೋಗಿಕ ಅನುಭವ ಪಡೆಯುವ ಸಮಗ್ರ ಕೃಷಿಯ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

Leave a Comment

Your email address will not be published. Required fields are marked *