ಲವ್, ಸೆಕ್ಸ್ ಮತ್ತು‌ ದೋಖಾ| ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ಮೇಲೆ ಬಿತ್ತು‌ ಎಫ್ಐಆರ್

ಸಮಗ್ರ ನ್ಯೂಸ್: ಬಿಜೆಪಿ ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್ ವಿರುದ್ಧ ಈಗ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಅಲ್ಲದೇ ಯುವತಿ ಪೊಲೀಸರಿಗೆ ನೀಡಿದಂತ ದೂರು ಆಧರಿಸಿ, ಎಫ್ ಐಆರ್ ಕೂಡ ದಾಖಲಾಗಿದೆ.

Ad Widget ... ..

ಮೈಸೂರಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ರಂಗನಾಥ್ ಗೆ ಪಾರ್ಟಿಯೊಂದರಲ್ಲಿ ಸಂತ್ರಸ್ತ ಯುವತಿ ಪರಿಚಯವಾಗಿದ್ದರು. ಪರಿಚಯ ಸ್ನೇಹ, ಆನಂತರ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರ ನಡುವೆ ಲವ್ವಿಡವ್ವಿಯಾಗಿದೆ.

Ad Widget

ಯುವತಿಯನ್ನು ಕಳೆದ ಜನವರಿಯಲ್ಲಿ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದ ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್, ಮದುವೆಯಾಗೋದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಆ ನಂತರ ಯುವತಿಯನ್ನು ನಿರಾಕರಿಸಲು ಶುರುಮಾಡಿದ್ದಾನೆ

ಯುವತಿ ಮಾತ್ರ ಮದುವೆಯಾಗುವಂತೆ ರಂಗನಾಥ್ ಹಿಂದೆ ಬಿದ್ದಿದ್ದಾಳೆ. ಇದಕ್ಕೆ ಒಪ್ಪದೇ ಇದ್ದಾಗ ಇದೀಗ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಬಿಜೆಪಿ ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಆದರೆ ಈ ಆರೋಪ ತಳ್ಳಿ ಹಾಕಿರುವಂತ ರಂಗನಾಥ್, ಯುವತಿ 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಾನು ಇದಕ್ಕೆ ನಿರಾಕರಿಸಿದ್ದೆ. ಈ ಹಿನ್ನಲೆಯಲ್ಲಿ ನನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾಗಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *