Ad Widget .

“ಸಪ್ತಸಾಗರದಾಚೆ ಎಲ್ಲೋ”/ ಎರಡನೇ ಭಾಗ ಇಂದು ತೆರೆಗೆ

ಸಮಗ್ರ ನ್ಯೂಸ್: ಜನಮೆಚ್ಚುಗೆಗೆ ಪಾತ್ರವಾಗಿದ್ದ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ನಟಿಸಿದ್ದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಎರಡನೇ ಭಾಗ ಇಂದು ತೆರೆ ಕಾಣುತ್ತಿದೆ.

Ad Widget . Ad Widget .

ಕೌಟುಂಬಿಕ ಕಥಾಹಂದರವನ್ನು ಒಳಗೊಂಡಿದ್ದ “ಸಪ್ತ ಸಾಗರದಾಚೆ ಎಲ್ಲೋ” ಚಿತ್ರದ ಮೊದಲ ಭಾಗದ ಕೊನೆಯಲ್ಲಿ ನಾಯಕ ಜೈಲು ಸೇರಿದ್ದ. ಇದೀಗ ತೆರೆ ಮೇಲೆ ಬರುತ್ತಿರುವ ಎರಡನೇ ಭಾಗವು ನಾಯಕ ಜೈಲಿನಿಂದ ಹೊರಬಂದ ನಂತರದ ಕಥೆಯನ್ನು ಹೊಂದಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ.

Ad Widget . Ad Widget .

ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರ ಜೆ ಆಚಾರ್, ಶರತ್ ಲೋಹಿತಾಶ್ವ ನಟಿಸಿದ್ದಾರೆ.

Leave a Comment

Your email address will not be published. Required fields are marked *