ಉಡುಪಿ: ಕಟಪಾಡಿ ರೈಲ್ವೆ ಹಳಿ ಮೇಲೆ ಅಪರಿಚಿತ ಶವ ಪತ್ತೆ

ಸಮಗ್ರ ನ್ಯೂಸ್: ರೈಲ್ವೆ ಹಳಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಉಡುಪಿಯ ಕಟಪಾಡಿ ಸಮೀಪದ ಅಚ್ಚಡ ಬಳಿ ನಡೆದಿದೆ.

Ad Widget ... ..

ರೈಲು ಹಳಿಯಲ್ಲಿ ಓಡಾಡುವ ವೇಳೆ ಮುಂಜಾನೆ 4.30ರ ಸುಮಾರಿಗೆ ಸಂಚರಿಸುವ ವೇಳೆ ರೈಲು ಡಿಕ್ಕಿ ಹೊಡೆದಿರಬಹುದು ಅಥವಾ ರೈಲಿನಿಂದ ಆಯ ತಪ್ಪಿ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಸಮಾಜ ಸೇವಕರಾದ ಸೂರಿ ಶೆಟ್ಟಿ ಕಾಪು, ಆಸ್ಟಿನ್ ಕೋಟ್ಯಾನ್ ಕಟಪಾಡಿ, ಆಂಬುಲೆನ್ಸ್ ಚಾಲಕ ನಾಗರಾಜ ಛಿದ್ರಗೊಂಡಿರುವ ಯುವಕನ ಶವವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಕಾರ್ಯಾಚರಿಸುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Ad Widget

Leave a Comment

Your email address will not be published. Required fields are marked *