ಸಮಗ್ರ ನ್ಯೂಸ್: ಯೋಗೀಶ್ ಹೊಸೋಳಿಕೆ ಸಂಪಾದನೆಯ ಮದುವೆ ನೆನಪಿನ ಕುರಿತ ಮೊತ್ತ ಮೊದಲ ಅರೆಭಾಷೆಯ ಎಲಾಡಿಕೆ ಕೃತಿಯು ನ. 14ರಂದು ಹೊಸೋಳಿಕೆ ಕಟ್ಟೆಮನೆ ದೈವಸ್ಥಾನದಲ್ಲಿ ದೀಪಾವಳಿ ಆಚರಣೆಯೊಂದಿಗೆ ಕುಟುಂಬಸ್ಥರು ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ವಿಶಿಷ್ಟ ರೀತಿಯಲ್ಲಿ ಬಿಡುಗಡೆಗೊಂಡಿತು.
ಗುತ್ತಿಗಾರು ಕಿರಣ ರಂಗ ಅಧ್ಯಯನ ಸಂಸ್ಥೆ ಪುಸ್ತಕ ಪ್ರಕಟಿಸಿ, ಕುಟುಂಬದ ಹಿರಿಯರಾದ ವಿಶ್ವನಾಥ ಹೊಸೋಳಿಕೆ ಪುಸ್ತಕ ಬಿಡುಗಡೆ ಗೊಳಿಸಿದರು. ಕುಟುಂಬದ ಅಧ್ಯಕ್ಷ ಎಚ್.ಬಿ. ಕೇಶವ ಹೊಸೋಳಿಕೆ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಿರಣ ಸಂಸ್ಥೆ ಅಧ್ಯಕ್ಷ ಯೋಗೀಶ್ ಹೊಸೋಳಿಕೆ, ಜಯಶ್ರೀ ಯೋಗೀಶ್ ಹೊಸೋಳಿಕೆ, ವಿದ್ವತ್ ವೈ ಹೊಸೋಳಿಕೆ, ಕುಟುಂಬದ ಮುಖ್ಯಸ್ಥ ಎಚ್. ಬಿ. ತೀರ್ಥರಾಮ ಹೊಸೋಳಿಕೆ, ರಾಧಾಕೃಷ್ಣ ಹೊಸೋಳಿಕೆ, ಕಿರಣ ಸಂಸ್ಥೆ ಹಿತೈಷಿಗಳಾದ ಎಚ್.ಬಿ. ಚಂದ್ರಶೇಖರ ಹೊಸೋಳಿಕೆ, ರವೀಂದ್ರ ಹೊಸೋಳಿಕೆ, ಮತ್ತು ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.