ತಕ್ಷಣದಿಂದಲೇ ಜಾರಿಗೆ ಬರುವಂತೆ ಆರ್​ಬಿಐನಿಂದ ಮಹತ್ವದ ಸೂಚನೆ| ಸಾಲ ನೀಡದಂತೆ ನಿರ್ದೇಶನ|ಯಾರಿಗೆ? ಯಾಕೆ?

ಸಮಗ್ರ ನ್ಯೂಸ್: ಹಣಕಾಸು ಸಂಸ್ಥೆಗಳು ಹಾಗೂ ಆರ್ಥಿಕ ವಹಿವಾಟಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವ ಅವಕಾಶ ಇರುವ ಭಾರತೀಯ ರಿಸರ್ವ್ ಬ್ಯಾಂಕ್ ಇಂದು ತಕ್ಷಣದಿಂದಲೇ ಜಾರಿಗೆ ಬರುವಂಥ ಮಹತ್ವದ ನಿರ್ದೇಶನವೊಂದನ್ನು ನೀಡಿದೆ.

Ad Widget ... ..

ಪ್ರಮುಖವಾಗಿ ಸಾಲ ಮಂಜೂರು ಮತ್ತು ಸಾಲ ವಿತರಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಆರ್​ಬಿಐ ಈ ನಿರ್ದೇಶನವನ್ನು ನೀಡಿದೆ. ಆರ್ಥಿಕ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಬಜಾಜ್​ ಫೈನಾನ್ಸ್​ ಲಿ. ಕಂಪನಿಗೆ ಆರ್​​ಬಿಐ ಈ ನಿರ್ದೇಶನ ನೀಡಿದೆ.

Ad Widget

ಕಂಪನಿಯು ತನ್ನ ಎರಡು ಸಾಲ ಯೋಜನೆಗಳಾದ ಇಕಾಮ್​ ಮತ್ತು ಇನ್​ಸ್ಟಾ ಇಎಂಐ ಕಾರ್ಡ್​ ಅನ್ವಯ ಯಾವುದೇ ಸಾಲ ಮಂಜೂರು ಮತ್ತು ಸಾಲ ವಿತರಣೆ ಮಾಡಬಾರದು. ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಸೂಚನೆಯನ್ನು ಪಾಲಿಸಬೇಕು ಎಂದು ಬಜಾಜ್​ ಫೈನಾನ್ಸ್​​ ಲಿಮಿಟೆಡ್​​ಗೆ ಆರ್​​ಬಿಐ ತಿಳಿಸಿದೆ. ಡಿಜಿಟಲ್ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಗಳ ನಿಬಂಧನೆಗಳನ್ನು ಕಂಪನಿಯು ಅನುಸರಿಸದಿರುವ ಹಿನ್ನೆಲೆಯಲ್ಲಿ ಆರ್​​ಬಿಐ ಈ ಕ್ರಮಕೈಗೊಂಡಿದೆ. ಅದರಲ್ಲೂ ವಿಶೇಷವಾಗಿ ಈ ಎರಡು ಸಾಲ ನೀಡುವ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಕೆಲವು ಲೋಪಗಳು ಇರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಆರ್​​ಬಿಐ ತಿಳಿಸಿದೆ.

Leave a Comment

Your email address will not be published. Required fields are marked *