Ad Widget .

ಕೇರಳ ಅರಣ್ಯ ಪ್ರದೇಶ ವ್ಯಾಪ್ತಿಯ ಬಿರುನಾಣಿ ಸಮೀಪ ನೆನ್ನೆ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ|ಓರ್ವ ನಕ್ಸಲನಿಗೆ ಗಾಯ

ಸಮಗ್ರ ನ್ಯೂಸ್: ಕೇರಳದ ಕಣ್ಣೂರು ಜಿಲ್ಲೆ ವ್ಯಾಪ್ತಿಯ ಕೊಡಗಿನ ಬಿರುನಾಣಿ ಗಡಿ ಭಾಗದಲ್ಲಿ ನಕ್ಸಲ್ ನಿಗ್ರಹ ತಂಡ ಹಾಗೂ ನಕ್ಸಲರ ನಡುವೆ ನ. 13ರಂದು ಗುಂಡಿನ ಚಕಮುಕಿ ನಡೆದು ಒರ್ವ ನಕ್ಸಲನಿಗೆ ಗಾಯವಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಗಾಯಗೊಂಡ ನಕ್ಸಲ್ ಶ್ರೀಮಂಗಳ ಕುಟ್ಟ ವ್ಯಾಪ್ತಿಯ ಆಸ್ಪತ್ರೆ ಅಥವಾ ಔಷಧಿ ಮಳಿಗೆಗೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಕುಟ್ಟ ಗಡಿ ಭಾಗ ಹಾಗೂ ಅದರ ವ್ಯಾಪ್ತಿಯಲ್ಲಿ ಬಿಗಿ ನಾಕಬಂದಿ ಹಾಕಿದ್ದು ದಿನದ 24 ಗಂಟೆ ಬಿಗಿ ಪೊಲೀಸ್ ತಪಾಸಣಾ ಕಾರ್ಯ, ಹಾಗೂ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್ ಕುಟ್ಟ ಭಾಗಕ್ಕೆ ಭೇಟಿ ನೀಡಿದ್ದಾರೆ.

Ad Widget . Ad Widget . Ad Widget .

ಕಳೆದ ಮಂಗಳವಾರ ಕೇರಳದ ವೈನಾಡು ಜಿಲ್ಲೆಯ ತಳಪುಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಪಿರಿಯ ಅರಣ್ಯ ಪ್ರದೇಶದಲ್ಲಿ ಕೇರಳ ಪೊಲೀಸರ ವಿಶೇಷ ತಂಡಗಳು ಕೂಂಬಿಂಗ್ ನಡೆಸುತ್ತಿರುವಾಗ ನಕ್ಸಲರು ಮಂಗಳವಾರ ರಾತ್ರಿ ಚಪ್ಪರ ಕಾಲನಿಗೆ ಐವರ ನಕ್ಸಲರ ತಂಡ ಆಗಮಿಸಿದಾಗ ಕೇರಳ ಪೊಲೀಸರು ಅವರನ್ನು ಸುತ್ತುವರಿದಾಗ ಗುಂಡಿನ ಚಕಮಕಿ ನಡೆದು ಮೂವರು ನಕ್ಸಲರು ತಪ್ಪಿಸಿಕೊಂಡಿದ್ದು. ಇಬ್ಬರನ್ನ ಸೆರೆ ಹಿಡಿಯಲಾಗಿತ್ತು ಕೇರಳದ ನಕ್ಸಲ್ ಮುಖಂಡ ಚಂದ್ರು ಅಲಿಯಾಸ್ ತಿರು ವೆಂದಿಗಂ ಮತ್ತು ಕರ್ನಾಟಕದ ಶೃಂಗೇರಿಯ ಬೆಳಗೂಡು ಕೂಡಿಗೆಯ ಶ್ರೀಮತಿ ಅಲಿಯಾಸ್ ಉಣ್ಣಿಮಾಯ ರವರನ್ನು ಕೇರಳ ಪೊಲೀಸರು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ನಕ್ಷಲ್ಲರು ಕಣ್ಣೂರು ಜಿಲ್ಲೆಯ ವ್ಯಾಪ್ತಿಯ ಕೊಡಗಿನ ಬಿರುನಾಣಿ ಸಮೀಪದ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ನಿನ್ನೆ ಗುಂಡಿನ ಚಕಮಕಿ ನಡೆದಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ರಾಮರಾಜನ್ ಅವರು ಕುಟ್ಟ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮವನ್ನು ಬಿಗಿಗೊಳಿಸಿ, ಕರ್ತವ್ಯದಲ್ಲಿದ್ದ ಪೊಲೀಸರಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ.

Leave a Comment

Your email address will not be published. Required fields are marked *