ಅಕ್ರಮ ವಿದ್ಯುತ್ ಸಂಪರ್ಕ/ ಕುಮಾರಸ್ವಾಮಿಗೆ 68 ಸಾವಿರ ದಂಡ ವಿಧಿಸಿದ ಬೆಸ್ಕಾಂ

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ದೀಪಾವಳಿ ಹಬ್ಬದಂದು ಜೆ ಪಿ ನಗರದ ತಮ್ಮ ನಿವಾಸಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು 68 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

Ad Widget ... ..

ರಾಜ್ಯಾದ್ಯಂತ ಚರ್ಚೆಗೆ ಗುರಿಯಾಗಿದ್ದ ಅಕ್ರಮ ವಿದ್ಯುತ್ ಸಂಪರ್ಕ ಪ್ರಕರಣ ದಂಡ ವಿಧಿಸಿರುವ ಬೆಸ್ಕಾಂ, ದಂಡದ ಮೊತ್ತವನ್ನು ಏಳು ದಿನಗಳ ಒಳಗಾಗಿ ಪಾವತಿ ಮಾಡುವಂತೆ ಸೂಚಿಸಿದೆ.

Ad Widget

ವಿದ್ಯುತ್ ಕಳ್ಳತನ ಎಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಎಫ್‍ಐಆರ್ ದಾಖಲಾಗಿ, ಬೆಸ್ಕಾಂ ಅಧಿಕಾರಿಗಳು ಜೆ ಪಿ ನಗರದ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ವೇಳೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿರುವುದು ದೃಢವಾಗಿತ್ತು.

Leave a Comment

Your email address will not be published. Required fields are marked *