ವಿಶ್ವಕಪ್ ವೈಫಲ್ಯ/ ನಾಯಕತ್ವಕ್ಕೆ ಬಾಬರ್ ಅಜಂ ಗುಡ್‍ಬೈ

ಸಮಗ್ರ ನ್ಯೂಸ್: ಭಾರತದಲ್ಲಿ ನಡೆದ ಐಸಿಸಿ ಟೂರ್ನಿಯಲ್ಲಿ ಹೀನಾಯವಾಗಿ ಸೋತು ಹೊರಬಿದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಸೋಲಿನ ಹೊಣೆ ಹೊತ್ತು ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಾಕಿಸ್ತಾನದ ಎಲ್ಲ ಮೂರು ಮಾದರಿಯ ಕ್ರಿಕೆಟ್‍ನ ನಾಯಕತ್ವಕ್ಕೆ ಬಾಬರ್ ರಾಜೀನಾಮೆ ನೀಡಿದ್ದಾರೆ.

Ad Widget ... ..

ಏಕದಿನ ವಿಶ್ವಕಪ್‍ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪಾಕಿಸ್ತಾನ ಸೆಮಿಫೈನಲ್ ತಲುಪಲು ವಿಫಲವಾಗಿತ್ತು. ಈ ಹಿನ್ನಲೆಯಲ್ಲಿ ನಾಯಕ ಬಾಬರ್ ಅಜಂ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ತಂಡದ ವೈಫಲ್ಯ ಬಾಬರ್ ಅಜಂನ ಬ್ಯಾಟಿಂಗ್‍ನ ಮೇಲೂ ಪರಿಣಾಮ ಬೀರಿತ್ತು.

Ad Widget

ಈ ಕುರಿತು ಟ್ವೀಟ್ ಮಾಡಿರುವ ಬಾಬರ್ ಅಜಂ, 2019ರಲ್ಲಿ ನಾಯಕ ಸ್ಥಾನ ವಹಿಸಿಕೊಂಡಿದ್ದು, ಅನೇಕ ಏಳು ಬೀಳುಗಳನ್ನು ಕಂಡಿದ್ದೇನೆ. ಎಲ್ಲರ ಪ್ರಯತ್ನದಿಂದಾಗಿ ವೈಟ್‍ಬಾಲ್ ಕ್ರಿಕೆಟ್‍ನಲ್ಲಿ ಅಗ್ರಸ್ಥಾನಕ್ಕೆ ಏರಿತು. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ನಾನು ರಾಜೀನಾಮೆ ಕೊಡುತ್ತಿದ್ದೇನೆ. ಈ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೂತನ ಕಪ್ತಾನನಿಗೆ ಪೂರ್ಣ ಬೆಂಬಲವನ್ನು ನೀಡುತ್ತೇನೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *