Ad Widget .

ಫೈನಲ್ ತಲುಪಿದ ಭಾರತ/ ಮಿಚೆಲ್ ಅಬ್ಬರದ ನಡುವೆ ಸೋತ ನ್ಯೂಜಿಲೆಂಡ್

ಸಮಗ್ರ ನ್ಯೂಸ್: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 70 ರನ್ನುಗಳಿಂದ ಗೆದ್ದು ಭಾರತ ಫೈನಲ್ ತಲುಪಿದೆ. ಮಿಚೆಲ್ ಅಬ್ಬರದ ಶತಕದ ನಡುವೆಯೂ ನ್ಯೂಜಿಲೆಂಡ್ ಸೋತು ಹೊರಬಿದ್ದಿದೆ.

Ad Widget . Ad Widget .

ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಐಯ್ಯರ್ ಅವರ ಶತಕದ ಬಲದಿಂದ 4 ವಿಕೆಟ್ ಕಳೆದುಕೊಂಡು 397 ರನ್ ಗಳಿಸಿತು. ರೋಹಿತ್ ಶರ್ಮಾ 47, ಶುಭ್‍ಮನ್ ಗಿಲ್ 80 ಮತ್ತು ರಾಹುಲ್ 39 ರನ್ ಗಳಿಸಿದರು. ವಿರಾಟ್ ಕೊಹ್ಲಿ 113 ಎಸೆತಗಳಲ್ಲಿ 117 ರನ್ ಗಳಿಸಿದರೆ, ಶ್ರೇಯಸ್ ಐಯ್ಯರ್ 70 ಎಸೆತಗಳಲ್ಲಿ 105 ರನ್ನುಗಳನ್ನು ಗಳಿಸಿದರು. ನ್ಯೂಜಿಲೆಂಡ್ ಪರವಾಗಿ ಟಿಮ್ ಸೌಥಿ 3 ವಿಕೆಟ್ ಗಳಿಸಿದರು.

Ad Widget . Ad Widget .

398 ರನ್ನುಗಳ ಗುರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಆರಂಭಿಕರಿಬ್ಬರನ್ನು ಬೇಗನೆ ಕಳೆದುಕೊಂಡಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಮತ್ತು ಡ್ಯಾರಿಲ್ ಮಿಚೆಲ್ ಹೋರಾಟ ಮುಂದುವರಿಸಿದರು. ಕೇನ್ ವಿಲಿಯಮ್ಸನ್ 69 ರನ್ನುಗಳನ್ನು ಗಳಿಸಿ ನಿರ್ಗಮಿಸಿದರೆ, ಮಿಚೆಲ್ ಭರ್ಜರಿ ಶತಕ ಬಾರಿಸಿ ಮಿಂಚಿದರು. 119 ಎಸೆತಗಳನ್ನು ಎದುರಿಸಿದ ಮಿಚೆಲ್ 9ಬೌಂಡರಿ ಮತ್ತು 7 ಸಿಕ್ಸರ್‍ಗಳ ನೆರವಿನಿಂದ 134 ರನ್ ಗಳಿಸಿದರು. ನಂತರದ ಬ್ಯಾಟ್ಸ್‍ಮನ್‍ಗಳ ವೈಫಲ್ಯದಿಂದ ನ್ಯೂಜಿಲೆಂಡ್ ಸೋತು ಹೊರಬಿದ್ದಿತು. ಭಾರತದ ಪರವಾಗಿ ಮೊಹಮ್ಮದ್ ಶಮಿ 7 ವಿಕೆಟ್‍ಗಳನ್ನು ಪಡೆದು ಮಿಂಚಿದರು.

ಈ ಗೆಲುವಿನ ಮೂಲಕ ಭಾರತ ಫೈನಲ್ ತಲುಪಿದ್ದು, ನಾಳೆ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ನಡುವೆ ನಡೆಯಲಿರುವ ಎರಡನೇ ಸೆಮಿಫೈನಲ್‍ನ ವಿಜೇತ ತಂಡವನ್ನು ಫೈನಲ್‍ನಲ್ಲಿ ಎದುರಿಸಲಿದೆ.

Leave a Comment

Your email address will not be published. Required fields are marked *