Ad Widget .

ಖುರ್ಚಿ ಕೆಳಗಿರಿಸಿದ್ಧ ಪಟಾಕಿಗೆ ಆಕಸ್ಮಿಕ ಬೆಂಕಿ| ಚಿಕ್ಕಮಗಳೂರಿನಲ್ಲಿ ಯುವಕ ಸಾವು

ಸಮಗ್ರ ನ್ಯೂಸ್: ಖುರ್ಚಿ ಕೆಳಗೆ ಇಟ್ಟಿದ್ದ ಪಟಾಕಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಚೇರ್‌ ಮೇಲೆ ಕುಳಿತಿದ್ದ ಯುವಕ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಬಳಿಯ ಸುಣ್ಣದಹಳ್ಳಿಯಲ್ಲಿ ನಡೆದಿದೆ.

Ad Widget . Ad Widget .

ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿಗಳನ್ನು ತರಲಾಗಿತ್ತು. ಪಟಾಕಿ ಇರುವ ಚೀಲವನ್ನು ಕುರ್ಚಿ ಕೆಳಗೆ ಇಡಲಾಗಿತ್ತು. ಅದಕ್ಕೆ ಆಕಸ್ಮಿಕವಾಗಿ ಕಿಡಿ ತಗುಲಿ ಈ ದರ್ಘಟನೆ ನಡೆದಿದೆ.

Ad Widget . Ad Widget .

ಪಟಾಕಿ ಸಿಡಿದ ರಭಸಕ್ಕೆ ಯುವಕ ಪ್ರದೀಪ್‌ ಐದು ಎತ್ತರಕ್ಕೆ ಹಾರಿದ್ದಾನೆ. ಅದೇ ವೇಗವಾಗಿ ಕೆಳಗೆ ಬಿದ್ದಿದ್ದು, ಇದರಿಂದ ಆತನ ಸೂಕ್ಷ್ಮ ಭಾಗಗಳಿಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಮತ್ತೊಬ್ಬ ಯುವಕನಿಗೂ ಗಂಭೀರ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯಿಂದಾಗಿ ಮನೆಯ ಕಿಟಕಿ ಗಾಜುಗಳು ಕೂಡಾ ಪುಡಿಪುಡಿಯಾಗಿವೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Comment

Your email address will not be published. Required fields are marked *