ಕೆಇಎ ಪರೀಕ್ಷೆ| ಮಾಂಗಲ್ಯ, ಕಾಲುಂಗುರ, ಹಿಜಾಬ್ ಗೆ ಅವಕಾಶ

ಸಮಗ್ರ ನ್ಯೂಸ್: ನ.18 ಮತ್ತು 19 ರಂದು ನಡೆಯಲಿರುವ ಕೆಇಎ ಪರೀಕ್ಷೆಗಳಿಗೆ ಮಹತ್ವದ ಮಾಹಿತಿ ಹೊರಡಿಸಲಾಗಿದೆ. ಪರೀಕ್ಷೆಯಲ್ಲಿ ಹಿಜಾಬ್, ಕಾಲುಂಗುರ, ಮಾಂಗಲ್ಯ ಧರಿಸಲು ಪರೀಕ್ಷಾ ಪ್ರಾಧಿಕಾರ ಅನುಮೋದನೆ ನೀಡಿದೆ.

Ad Widget ... ..

ಈ ಬಗ್ಗೆ ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ, ನ. 18 ಮತ್ತು 19 ರಂದು ನಡೆಯಲಿರುವ ಪರೀಕ್ಷೆಗಳಿಗೆ ಈ ಹಿಂದಿನಂತೆ ಹಿಜಾಬ್ ಮುಂದುವರೆಯಲಿದೆ. ಆದರೆ ಎಲ್ಲಾ ಅಭ್ಯರ್ಥಿಗಳು ಪರೀಕ್ಷೆಗಳಿಗೆ ಹಾಜರಾಗುವ ಮೊದಲು ನಿಗದಿತ ಸಮಯಕ್ಕಿಂತ ಎರಡು ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಹಾಜರಿರಬೇಕು ಎಂದು ಹೇಳಿದ್ದಾರೆ.

Ad Widget

ಹಿಂದೂ ಅಭ್ಯರ್ಥಿಗಳು ಪರೀಕ್ಷೆ ಬರೆಯುವಾಗ ಕೊಠಡಿಯಲ್ಲಿ ಮಾಂಗಲ್ಯ, ಕಾಲುಂಗರ ಧರಿಸಬಹುದು. ಆದರೆ ಬೇರೆ ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *