Ad Widget .

ಕೊಹ್ಲಿ ಶತಕಗಳ ದಾಖಲೆ/ ಅಭಿನಂದನೆ ಸಲ್ಲಿಸಿದ ಮೋದಿ

ಸಮಗ್ರ ನ್ಯೂಸ್: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶತಕವನ್ನು ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕೊಹ್ಲಿಯ ಈ ದಾಖಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Ad Widget . Ad Widget .

ವಿರಾಟ್ ಕೊಹ್ಲಿ ತಮ್ಮ 50ನೇ ಶತಕವನ್ನು ಗಳಿಸುವ ಮೂಲಕ ಸಚಿನ್ ಅವರ 49 ಶತಕಗಳ ದಾಖಲೆಯನ್ನು ಮುರಿದಿದ್ದು, ಇದಕ್ಕಾಗಿ ವಿಶ್ವದ ಎಲ್ಲೆಡೆಯಿಂದ ಶುಭಹಾರೈಕೆಗಳು ಹರಿದು ಬರುತ್ತಿವೆ. ಪ್ರಧಾನಿ ನರೇಂದ್ರ ಮೊದಿ ಕೂಡ ಟ್ವೀಟ್ ಮಾಡಿದ್ದು, ಇಂದು ವಿರಾಟ್ ಕೊಹ್ಲಿ ಕೇವಲ ತಮ್ಮ 50ನೇ ಶತಕವನ್ನು ಗಳಿಸಿದ್ದು ಮಾತ್ರವಲ್ಲ ಅತ್ಯುತ್ತಮ ಕ್ರೀಡಾ ಮನೋಭಾವವನ್ನು ವ್ಯಾಖ್ಯಾನಿಸುವ ಶ್ರೇಷ್ಠತೆ ಮತ್ತು ಪರಿಶ್ರಮದ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಈ ಗಮನಾರ್ಹ ಮೈಲುಗಲ್ಲು ಅವರ ನಿರಂತರ ಸಮರ್ಪಣೆ ಮತ್ತು ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ. ನಾನು ಅವರಿಗೆ ಹೃತ್ಫೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರು ಮುಂದಿನ ಪೀಳಿಗೆಗೆ ಬೆಂಚ್‍ಮಾರ್ಕ್ ಸ್ಥಾಪಿಸುವುದನ್ನು ಮುಂದುವರಿಸಲಿ ಎಂದು ಹೇಳಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *