Ad Widget .

ಚಳಿಗಾಲದ ಆರಂಭ/ ಮುಚ್ಚಿತು ಕೇದಾರನಾಥದ ಬಾಗಿಲು

ಸಮಗ್ರ ನ್ಯೂಸ್: ಉತ್ತರ ಭಾರತದಲ್ಲಿ ಚಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. ಕೇದಾರನಾಥ ಪ್ರದೇಶವು ಈಗಾಗಲೇ ಹಿಮದ ಹೊದಿಕೆಯಿಂದ ಆವೃತವಾಗಿರುವ ಕಾರಣ ಇಂದು ಶುಭ ಮಹೂರ್ತದಲ್ಲಿ ವಿವಿಧ ಆಚರಣೆಗಳೊಂದಿಗೆ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು.

Ad Widget . Ad Widget .

ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಆರು ತಿಂಗಳುಗಳ ಕಾಲ ಭಕ್ತರಿಗಾಗಿ ಮುಚ್ಚಲಾಗಿದೆ. ಕೇದಾರನಾಥ ದೇವರ ಪಂಚಮುಖಿ ಡೋಲಿಯು ವಿಧಿವಿಧಾನಗಳ ಪ್ರಕಾರ ದೇವಾಲಯದ ಆವರಣದಿಂದ ಹೊರಟಿತು. ಕೇದಾರನಾಥನ ಭೋಗ್ ವಿಗ್ರಹವು ಚಳಿಗಾಲದ ವಿಶ್ರಾಂತಿ ಸ್ಥಳ ಉಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ಬರಲಿದ್ದು, ಮುಂದಿನ ಆರು ತಿಂಗಳುಗಳ ಕಾಲ ಇಲ್ಲಿನ ದೇವಾಲಯಕ್ಕೆ ಭೇಟಿ ಮಾಡಿ ಪೂಜಿಸುವ ಮೂಲಕ ಆಶೀರ್ವಾದ ಪಡೆಯಬಹುದು.

Ad Widget . Ad Widget .

ಚಳಿಗಾಲದಲ್ಲಿ ಎಲ್ಲಾ ನಾಲ್ಕು ಧಾಮಗಳಲ್ಲಿ ಭಾರೀ ಹಿಮಪಾತವು ಇರಲಿದ್ದು, ಈ ಧಾಮಗಳು ಚಳಿಗಾಲದಲ್ಲಿ ಆರು ತಿಂಗಳುಗಳ ಕಾಲ ಮುಚ್ಚಿರುತ್ತದೆ.

Leave a Comment

Your email address will not be published. Required fields are marked *