Ad Widget .

ಕುಶಾಲನಗರದಲ್ಲಿ‌ ಕೇರಳದ ವಾಹನ ಅಡ್ಡಗಟ್ಟಿ ದರೋಡೆ| ಇಬ್ಬರ ಬಂಧನ

ಸಮಗ್ರ ನ್ಯೂಸ್: ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ಕೇರಳದ ವಾಹನವನ್ನು ಅಡ್ಡಗಟ್ಟಿ ಮೊಬೈಲ್ ಹಾಗೂ ಹಣವನ್ನು ದರೋಡೆ ಮಾಡಿದ ಘಟನೆ ನಡೆದಿದೆ.

Ad Widget . Ad Widget .

ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಆರು ಜನರ ಇರುವ ತಂಡ ಬೆಂಗಳೂರಿನಿಂದ ಕಾಸರಗೋಡು ಕಡೆಗೆ ಪ್ರಯಾಣ ಬೆಳೆಸುತ್ತಿದ್ದ ಲೋಹಿತ್ ದಾಸನ್ ಹಾಗೂ ಜೈಸಿತ್ ಎಂಬುವವರ ವಾಹನವನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದಾರೆ. ನಂತರ ಅದೇ ವಾಹನವನ್ನು ಸಿದ್ದಾಪುರ ರಸ್ತೆಯ ಮಾರ್ಗವಾಗಿ ಕೊಂಡೊಯ್ಯುತ್ತಿದ್ದಾಗ, ವಾಹನವು ಮಗಚಿಕೊಂಡಿದೆ.

Ad Widget . Ad Widget .

ಪೊಲೀಸರು ತನಿಖೆ ಕೈಗೊಂಡಿದ್ದು ಇನ್ನುಳಿದ ನಾಲ್ಕು ಆರೋಪಿಗಳ ಬಂಧನಕ್ಕಾಗಿ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನ ನಡೆಸಿದ್ದಾರೆ. ನಂತರ ಘಟನೆಯ ಬಗ್ಗೆ ಮಾಧ್ಯಮದವರಿಗೆ ವಿವರವನ್ನು ನೀಡಿ ಪ್ರಾಥಮಿಕ ಹಂತದ ತನಿಖೆ ನಡೆಯುತ್ತಿದ್ದು, ದರೋಡೆ ನಡೆಸಿರುವ ಉದ್ದೇಶ ಮತ್ತು ದರೋಡೆ ಆಗಿರುವ ಮೊತ್ತದ ಬಗ್ಗೆ ವಿವರ ಪೂರ್ಣ ತನಿಖೆಯ ನಂತರವೇ ತಿಳಿಯಬಹುದಾಗಿದೆ ಎಂದರು.

Leave a Comment

Your email address will not be published. Required fields are marked *